Friday, April 19, 2024
spot_imgspot_img
spot_imgspot_img

ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ “ಅಮೃತ ಸಿಂಚನ” ಸ್ಮರಣ ಸಂಚಿಕೆ ಬಿಡುಗಡೆ, ಶಾಲಾ ಮುಖ್ಯೋಪಾಧ್ಯಾಯರಿಗೆ ಗುರು ನಮನ- ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಅಮೃತ ಸಿಂಚನ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಶಾಲಾ ಮುಖ್ಯ ಶಿಕ್ಷಕರಿಗೆ ಗುರು ನಮನ- ಕಾರ್ಯಕ್ರಮ ಸರಕಾರಿ ಪ್ರೌಢ ಶಾಲೆ ಮಾಣಿಲದಲ್ಲಿ ನಡೆಯಿತು.

ಶಿವಪ್ರಸಾದ್ ಸೊರಂಪಳ್ಳ ಅಧ್ಯಕ್ಷರು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸಮಿತಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುರುವ ನಡುಮನೆ ಮಹಾಬಲ ಭಟ್ ಶಾಲಾ ಸ್ಥಳ ದಾನಿಗಳು, ವನಿತಾ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾಣಿಲ, ರಾಜೇಶ್ ಕುಮಾರ್ ಬಾಳೆಕಲ್ಲು ಅಧ್ಯಕ್ಷರು ಸ್ವಾತಂತ್ರ‍್ಯ ಅಮೃತ ಮಹೋತ್ಸವ ಸಮಿತಿ, ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಮಾಣಿಲ, ಬಾಲಕೃಷ್ಣ ಪೂಜಾರಿ ಅಧ್ಯಕ್ಷರು ಪೆರುವಾಯಿ ಗ್ರಾಮ ಪಂಚಾಯತ್, ವಿಷ್ಣು ಕನ್ನಡಗುಳಿ ಪ್ರಧಾನ ಸಂಪಾದಕರು ಅಮೃತ ಸಿಂಚನ ಸ್ಮರಣ ಸಂಚಿಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶೈಕ್ಷಣಿಕ ವರ್ಷದಲ್ಲಿ ನಡೆದ ಶಾಲಾ ಅಭಿವೃದ್ಧಿ ಕಾರ್ಯಗಳನ್ನೂಳಗೊಂಡ ಅಮೃತ ಸ್ಮರಣ ಸಂಚಿಕೆಯನ್ನು ಡಾ. ವಿಶ್ವೇಶ್ವರ ಭಟ್ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಡ್ಯನಡ್ಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಮಾಲತಿ ಮುಖ್ಯ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕಲ್ಲಂಗಳ ಕೇಪು, ಇವರು ಗುರುನಮನವನ್ನು ಸ್ವೀಕರಿಸಿದ ಸುಬ್ರಹ್ಮಣ್ಯ ಭಟ್ ಕೆ. ಜಿ ರವರ ಬಗ್ಗೆ ಅಭಿನಂದನ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸುಬ್ರಹ್ಮಣ್ಯ ಭಟ್ ಕೆ.ಜಿ ಸುಮಾರು 36 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗಿ ಸೇವೆಗೈದು, ಕಳೆದ ಸುಮಾರು ವರುಷಗಳಿಂದ ಸರಕಾರಿ ಪ್ರೌಢ ಶಾಲೆ ಮಾಣಿಲದಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿ ಶಾಲಾ ಅಭಿವೃದ್ಧಿಯ ಜೊತೆಗೆ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಉತ್ತಮ ಮುಖ್ಯ ಶಿಕ್ಷಕರಾಗಿ ಸೇವೆ ಗೈದು, ಪೋಷಕರ, ಶಾಲಾಭಿಮಾನಿಗಳ ಹಾಗೂ ಮಕ್ಕಳ ನೆಚ್ಚಿನ ಮುಖ್ಯೋಪಾಧ್ಯಾಯರಾಗಿ ಮೆಚ್ಚುಗೆ ಗಳಿಸಿದ್ದಾರೆ. ಇವರು ತಮ್ಮ ಶೈಕ್ಷಣಿಕ ವೃತ್ತಿಯ ಜೊತೆಗೆ ಪೆರುವಾಯಿ ಶ್ರೀ ಮೂವರ್ ದೈವಂಗಳ್ ಪಿಲಿಚಾಮುಂಡಿ ದೈವಸ್ಥಾನದ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದ ಇವರು ಎಲ್ಲಾ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿ ಖ್ಯಾತಿ ಪಡೆದಿದ್ದಾರೆ. ಇದೀಗ ತಮ್ಮ ಶೈಕ್ಷಣಿಕ ವೃತ್ತಿ ಜೀವನದಿಂದ ನಿವೃತ್ತಿ ಜೀವನಕ್ಕೆ ತೆರಳುವ ಹಿನ್ನಲೆ ಗುರುನಮನ ಸಲ್ಲಿಸಲಾಯಿತು.

ಶಾಲಾ ಹಳೆ ವಿದ್ಯಾರ್ಥಿ, ಸುಬ್ರಹ್ಮಣ್ಯ ಭಟ್ ಕೆ.ಜಿರವರ ಶಿಷ್ಯ ಸುರೇಶ್ ನಾಯಕ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯ ಹರೀಶ್ ಬಳಂತಿಮೊಗರು, ರಮೇಶ್ ಎಂ ಬಾಯಾರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸುಬ್ರಹ್ಮಣ್ಯ ಭಟ್ ಕೆ.ಜಿರವರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿಯಲ್ಲಿ ಸಹಕರಿಸಿದ ಅಮೃತ ಸಿಂಚನ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ ವಿಷ್ಣು ಕನ್ನಡಗುಳಿ, ಸ್ವಾತಂತ್ರ‍್ಯ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ, ಮಾಣಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಅಮೃತ ಸಿಂಚನ ಸ್ಮರಣ ಸಂಚಿಕೆಯ ಲೇಖಕ ಪೂವಪ್ಪ ಶೆಟ್ಟಿ ಹಾಗೂ ರಮೇಶ್ ಎಂ ಬಾಯಾರು ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಸದ್ಯಸರು, ಸ್ವಾತಂತ್ರ‍್ಯ ಅಮೃತ ಮಹೋತ್ಸವ ಸಮಿತಿಯ ಸದಸ್ಯರು, ಹಳೆ ವಿದ್ಯಾರ್ಥಿಗಳು, ಶಾಲಾಭಿಮಾನಿಗಳು, ಶಾಲಾ ವಿದ್ಯಾರ್ಥಿಗಳು , ಶಿಕ್ಷಕ ವೃಂದ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಾಲಾ ಹಿರಿಯ ಶಿಕ್ಷಕ ಭುವನೇಶ್ವರ್ ಸಿ. ಸ್ವಾಗತಿಸಿದರು. ಸಹಶಿಕ್ಷಕಿ ಕವಿತಾ ವಂದಿಸಿ ದೈಹಿಕ ಶಿಕ್ಷಕ ಉಮನಾಥ ರೈ ಮೇರಾವು ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಲತಾ ಯು ಸನ್ಮಾನ ಪತ್ರ ವಾಚಿಸಿದರು.

- Advertisement -

Related news

error: Content is protected !!