Monday, May 20, 2024
spot_imgspot_img
spot_imgspot_img

ಮಾಧ್ಯಮಗಳಿಗೆ ಪೋನ್ ಮಾಡಿ ಡಿವೈಎಸ್ ಪಿ ಹೆಸರಿನಲ್ಲಿ ಬೆದರಿಕೆ ಹಾಕಿದ MLA ಟಿಕೇಟ್ ಆಕಾಂಕ್ಷಿ ದಿವ್ಯಪ್ರಭಾ ಗೌಡ ಚಿಲ್ತಡ್ಕ; ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆಳ್ಳಾರೆಯ ಲಾಡ್ಜ್ ಸ್ಟೋರಿಯ ಕಂಪ್ಲೀಟ್ ರಿಪೋರ್ಟ್

- Advertisement -G L Acharya panikkar
- Advertisement -

ಇತ್ತೀಚಿಗೆ ಬೆಳ್ಳಾರೆಯಲ್ಲಿ ನಡೆದ ಘಟನೆ ಕರಾವಳಿಯಾದ್ಯಂತ ಸುದ್ದಿಯಾಗಿತ್ತು. ಬೆಳ್ಳಾರೆಯ ಲಾಡ್ಜ್‌ನಲ್ಲಿ ಪೊಲೀಸಪ್ಪನ ಜೊತೆಗೆ ವಿವಾಹಿತ ಮಹಿಳೆ ಸಿಕ್ಕಿ ಬಿದ್ದ ಘಟನೆಯನ್ನು ಮಾಧ್ಯಮಗಳು ವರದಿ ಮಾಡಿತ್ತು. ವರದಿ ಪ್ರಸಾರ ಆಗುತ್ತಿದ್ದಂತೆ ಮಾಧ್ಯಮವೊಂದಕ್ಕೆ ಕರೆ ಮಾಡಿದ ವಿಧಾನಸಭಾ ಟಿಕೆಟ್‌ ಆಕಾಂಕ್ಷಿ ದಿವ್ಯ ಪ್ರಭಾ ಚಿಲ್ತಡ್ಕ ಕುಂಬಳ ಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತೆ ವರ್ತಿಸಿದ್ದು ಮಾತ್ರವಲ್ಲದೆ. ಈ ಸುದ್ದಿ ತನ್ನ ಕೌಟುಂಬಿಕ ವಿಚಾರ, ಆ ರೀತಿಯಾಗಿ ನಡೆದಿಲ್ಲ ಎಂದಿದ್ದಾರೆ.

ಮಾಧ್ಯಮಗಳಲ್ಲಿ ಬೆಳ್ಳಾರೆ ಲಾಡ್ಜ್ ನ ವರದಿ ವೈರಲ್ ಆಗುತ್ತಿದ್ದಂತೆ ದಿವ್ಯಪ್ರಭ ಚಿಲ್ತಡ್ಕ ರವರು ಫೋನಾಯಿಸಲು ಆರಂಭಿಸಿದ್ದಾರೆ
ಇನ್ನು ಕೆಲ ಮಾಧ್ಯಮಗಳಿಗೆ ಧಮ್ಕಿ ಹಾಕಿ ಕೂಡಾ ಬೆದರಿಸಿದ್ದಾರೆ.

ಅಷ್ಟು ಮಾತ್ರವಲ್ಲದೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ ಅಪಪ್ರಚಾರ ತಡೆಗಟ್ಟಬೇಕೆಂದು ವಿನಂತಿಸಿಕೊಂಡಿದ್ದು ಯಾಕೆ..? ಒಂದು ವೇಳೆ ಈ ಪ್ರಕರಣಕ್ಕೂ ತನಗೂ ಸಂಬಂಧವೇ ಇಲ್ಲ ಎಂದಾದಲ್ಲಿ ಯಾಕೆ ಈ ಪ್ರಕರಣದಲ್ಲಿ ಕೈಯಾಡಿಸಬೇಕೆಂಬುವುದನ್ನು ಗಮನಿಸಿದಾಗ, ಲಾಡ್ಜ್‌ನಲ್ಲಿ ಸಿಕ್ಕಿ ಬಿದ್ದ ವಿವಾಹಿತ ಮಹಿಳೆಯ ಸಂಬಂಧಿಕರು ಎಂಬುವುದು ತಿಳಿದು ಬಂದಿದೆ. ಮೊದಲೇ ಎಂಎಲ್‌ಎ ಟಿಕೆಟ್ ಆಕಾಂಕ್ಷಿಯಾಗಿದ್ದರಿಂದ ಈ ಸುದ್ದಿ ಮುಂದಿನ ರಾಜಕೀಯ ಭವಿಷ್ಯಕ್ಕೆ ಮುಳುವಾಗುತ್ತೆ ಎಂಬುವುದನ್ನು ಮನದಲ್ಲರಿಸಿಕೊಂಡು ವಿಷಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ.

ಘಟನೆಯ ವಿವರ:
ಬೆಳ್ಳಾರೆ ಲಾಡ್ಜ್‌ನಲ್ಲಿ ವಿವಾಹಿತ ಮಹಿಳೆ ಹಾಗೂ ಪೊಲೀಸ್ ಅಧಿಕಾರಿಯೊಬ್ಬರು ರಾಸಲೀಲೆ ನಡೆಸುತ್ತಿರುವಾಗ ಮಹಿಳೆಯ ಗಂಡ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾನೆ. ಈ ವೇಳೆ ಲಾಡ್ಜ್‌ ರೂಮಿನಲ್ಲಿ ಪತ್ನಿ ಸಿಕ್ಕಿದ್ದು ಆಕೆಯನ್ನು ವಿಚಾರಿಸಿದಾಗ ಅಸ್ಪಷ್ಟ ಮಾಹಿತಿ ನೀಡಿದ್ದಾಳೆ. ಕೊನೆಗೆ ಬಾಗಿಲು ದೂಡಿ ಒಳಗೆ ಹೋಗಿ ಬಾತ್‌ರೂಮ್‌ನಲ್ಲಿ ನೋಡಿದಾಗ ಪೊಲೀಸ್ ಇರುವುದು ಸ್ಪಷ್ಷವಾಗಿದೆ. ಪೊಲೀಸಪ್ಪ ತಾನು ಉಡುಪು ಧರಿಸಿ ಹೊರಡಲು ಅಣಿಯಾಗಿದ್ದು ಅಷ್ಟರಲ್ಲಿ ಬಂದ ಮಹಿಳೆಯ ಗಂಡ ಪೊಲೀಸಪ್ಪನನ್ನು ಹಿಡಿದು ಥಳಿಸಿದ್ದಾಗಿ ತಿಳಿದುಬಂದಿದೆ.

ಈ ಪ್ರಕರಣ ಅಲ್ಲಗೆಳೆಯುವಂತಿಲ್ಲ. ಮೊದಲು ಸಿಕ್ಕಿಬಿದ್ದ ಜೋಡಿಯ ಬಗ್ಗೆ ಹೆಚ್ಚಾಗಿ ಮಾಹಿತಿ ಲಭ್ಯವಾಗಿರಲಿಲ್ಲ. ಆದರೆ ಕುಂಬಳ ಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತೆ ದಿವ್ಯಪ್ರಭಾ ಚಿಲ್ತಡ್ಕ ಮಾಧ್ಯಮಕ್ಕೆ ಕರೆಮಾಡಿ ಅದೆಲ್ಲಾ ಸುಳ್ಳು ಸುದ್ದಿ. ಅದು ಕೌಟುಂಬಿಕ ವಿಚಾರಕ್ಕಾಗಿ ನಡೆದ ಮಾತಿನ ಚಕಮಕಿ ಎಂಬುದಾಗಿ ಮುಚ್ಚಿಹಾಕಲು ಯತ್ನಿಸಿದ್ದಾರೆ. ಈ ಬೆಳವಣಿಗೆಯಿಂದಲೇ ದಿವ್ಯ ಪ್ರಭಾ ಚಿಲ್ತಡ್ಕ ಅವರಿಗೂ ಈ ಪ್ರಕರಣಕ್ಕೂ ಸಂಬಂಧ ಇರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

https://bit.ly/3yahwZk

ಮಹಿಳಾ ಪೊಲೀಸ್ ಠಾಣೆಗೆ ದೂರು; ಅಪಪ್ರಚಾರ ತಡೆಗಟ್ಟಬೇಕೆಂದು ವಿನಂತಿ

ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ರಾಜಕೀಯ ಮುಖಂಡೆಯೊಬ್ಬರು ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ ಅಪಪ್ರಚಾರ ತಡೆಗಟ್ಟಬೇಕೆಂದು ವಿನಂತಿಸಿಕೊಂಡಿದ್ದಾಗಿ ತಿಳಿದುಬಂದಿದೆ.

ಬೆಳ್ಳಾರೆ ಕ್ರೈಂ ಎಸ್.ಐ. ಆನಂದರಿಗೂ, ಬೆಳ್ಳಾರೆಯ ಯುವ ಉದ್ಯಮಿ ನವೀನ್ ಎಂಬವರಿಗೂ ಅ.2 ರಂದು ಸಂಜೆ 7 ಗಂಟೆ ಸುಮಾರಿಗೆ ಚಕಮಕಿ ನಡೆದಿತ್ತು. ನವೀನರು ಆನಂದರಿಗೆ ಹೊಡೆದಿದ್ದಾರೆ ಎಂದು ಊರಿಡೀ ಪ್ರಚಾರವಿದೆ. ಆದರೆ ಹೊಡೆದಿಲ್ಲ – ಚಕಮಕಿ ನಡೆದಿದೆ ಎಂದು ಆನಂದರು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆನ್ನಲಾಗಿದೆ.

ಆನಂದರು ತನ್ನ ಮಿತ್ರರೊಬ್ಬರಿಗೆ ಬಾಡಿಗೆ ಕೊಠಡಿ ಕೊಡಿಸಲು ಹೋಗಿದ್ದರೆಂದೂ, ಆ ವಸತಿ ಗೃಹದ ಮಾಲಕರ ಸೊಸೆ ಕೊಠಡಿ ತೋರಿಸಲು ಹೋದರೆಂದೂ, ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಆಕೆಯ ಪತಿ ತಪ್ಪಾಗಿ ತಿಳಿದು ಹಲ್ಲೆ ನಡೆಸಲು ಮುಂದಾದರೆಂದೂ ಪೊಲೀಸ್ ಅಧಿಕಾರಿ ಮೇಲಧಿಕಾರಿಗಳೊಡನೆ ಹೇಳಿದ್ದಾರೆನ್ನಲಾಗಿದೆ. ಈ ಕುರಿತಂತೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.

ಸುದ್ದಿ ಹಾಕಿದರೆ ಜೈಲಿಗೆ ಹೋಗಬೇಕಾಗುತ್ತದೆ. ಡಿವೈಎಸ್‌ಪಿ, ಎಸ್ಪಿಯವರು ಸುದ್ದಿ ಹಾಕದಂತೆ ತಡೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕಿ ಬೆದರಿಸಿದ್ದಲದೆ ಡಿವೈಎಸ್‌ಪಿ ಮೂಲಕವೂ ಸುದ್ದಿ ಹಾಕದಂತೆ ಎಚ್ಚರಿಕೆ ನೀಡಿದ್ದಾಗಿ ಪತ್ರಿಕೆಗಳು ವರದಿ ಮಾಡಿದೆ.

ಈ ಬಗ್ಗೆ ಪತ್ರಕರ್ತರನ್ನು ಹಿರಿಯ ಅಧಿಕಾರಿಗಳ ಮೂಲಕ ಬೆದರಿಸುತ್ತಿರುವುದು, ಪೊಲೀಸ್ ಇಲಾಖೆಯಲ್ಲಿಯೇ ಇಂತ ಪೋಲಿ ಆಟ ಮಾಡೋ ಅಧಿಕಾರಿ ಇರುವುದು ಎಸ್ಪಿ ಅವರ ಗಮನಕ್ಕೆ ಇನ್ನೂ ಯಾಕೆ ಬಂದಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿ ಸಿಕ್ಕಿಬಿದ್ದಿರುವ ಬಗ್ಗೆ ಬೆಳ್ಳಾರೆ ಪೊಲೀಸರು ಸಹ ಜಾಣ ಮೌನ ವಹಿಸಿದ್ದಾರೆ.

ಕೊಡುಗೈ ದಾನಿ ದಿವ್ಯಪ್ರಭಾ ಚಿಲ್ತಡ್ಕ..!
ಇತ್ತೀಚಿಗೆ ದಿವ್ಯಪ್ರಭಾ ಅವರು ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಕಾರ್ಯಕ್ರಮಗಳಿಗೆ ತನ್ನಿಂದ ಆದಷ್ಟು ಸಹಾಯಹಸ್ತವಾಗಿ ಹಣ ನೀಡುತ್ತಿದ್ದಾರೆ. ಮುಂದಿನ ರಾಜಕೀಯ ಭವಿಷ್ಯಕ್ಕೆ ಈ ರೀತಿಯಾಗಿ ಮಾಡುತ್ತಿದ್ದಾರೋ ಎಂಬುವುದು ತಿಳಿದಿಲ್ಲ. ಆದರೆ ಇಂತಹ ಕೊಡುಗೈ ದಾನಿಗೆ ಈ ರೀತಿ ಆಗಬಾರದಿತ್ತು ಎಂದು ಜನರು ಮಾತನಾಡುತ್ತಿದ್ದಾರೆ.

- Advertisement -

Related news

error: Content is protected !!