Thursday, May 2, 2024
spot_imgspot_img
spot_imgspot_img

ಮಾಲ್ಡೀವ್ಸ್‌ನಲ್ಲಿ ದೇವರಕೊಂಡ ಜೊತೆ ರಶ್ಮಿಕಾ..?-ಗಾಸಿಪ್‌ ಹೆಚ್ಚಲು ಕಾರಣವಾಯ್ತು ಆ ಫೋಟೋ

- Advertisement -G L Acharya panikkar
- Advertisement -

ಮುಂಬೈ: ನಿನ್ನೆ ಕೆಲವೇ ನಿಮಿಷಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರು ಹಲವರ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದರು. ಆ ಮೂಲಕ ರಶ್ಮಿಕಾ-ವಿಜಯ್ ದೇವರಕೊಂಡ ಜೊತೆಯಾಗಿಯೇ ಮಾಲ್ಡೀವ್ಸ್‌ಗೆ ಹೋಗಿದ್ದಾರೆಂಬ ಅಂತೆಕಂತೆಗಳು ಹರಿದಾಡತೊಡಗಿದವು. ಇದೀಗ ಈ ಸುದ್ದಿಗೆ ಪುಷ್ಠಿ ಸಿಗುವಂತೆ ರಶ್ಮಿಕಾ ಮಾಲ್ಡೀವ್ಸ್‌ನಿಂದ ಸೆಲ್ಫೀ ಪೋಸ್ಟ್‌ ಮಾಡಿದ್ದು, ರಶ್ಮಿಕಾ ಜೊತೆ ದೇವರಕೊಂಡ ಕೂಡಾ ಇದ್ದಾರೆಂದೇ ಅಭಿಮಾನಿಗಳು ಊಹಿಸುತ್ತಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವೆ ಪ್ರೇಮಾಂಕುರವಾಗಿದೆ ಎಂಬ ಸುದ್ದಿ ಹರಡಿದ ಸ್ವಲ್ಪ ದಿನದಲ್ಲೇ ಅವರಿಬ್ಬರೂ ದೂರವಾಗಿದ್ದಾರೆಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ ಈ ಎರಡೂ ಸುದ್ದಿಗಳಿಗೆ ರಶ್ಮಿಕಾರಾಗಲೀ, ವಿಜಯ್ ಅವರಾಗಲೀ ಉತ್ತರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಒಂದು ಹಂತದಲ್ಲಿ ಈ ಜೋಡಿ ದೂರವಾಗಿದ್ದಾರೆಂಬುದೇ ನಿಜ ಎಂದು ಅಭಿಮಾನಿಗಳೂ ಸುಮ್ಮನಾಗಿದ್ದರು. ಆದರೆ ಅದೇ ಜೋಡಿ ನಿನ್ನೆ ಮತ್ತೆ ಸುದ್ದಿಯಾಗಿದ್ದಾರೆ. ರಜಾ ಮಜಕ್ಕಾಗಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್‌ಗೆ ಹಾರಿದ್ದಾರೆಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಕಾರಣ ಕೆಲವೇ ನಿಮಿಷಗಳ ಅಂತರದಲ್ಲಿ ಇಬ್ಬರೂ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಮತ್ತು ಈ ಫೋಟೋಗಳು ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು.

ಇಂದು ಮಾಲ್ಡೀವ್ಸ್‌ನಿಂದ ಲೇಟೆಸ್ಟ್ ಸೆಲ್ಫೀಯೊಂದನ್ನು ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರು ಮಾಲ್ಡೀವ್ಸ್‌ಗೇ ಹೋಗಿರುವುದು ಎಂಬ ಊಹೆ ನಿಜವಾಗಿದೆ. ಆದರೆ ರಶ್ಮಿಕಾರೊಂದಿಗೆ ವಿಜಯ್ ಕೂಡಾ ಇದ್ದಾರೆ ಎಂದೇ ಅಭಿಮಾನಿಗಳು ಊಹಿಸಿದ್ದರೂ, ಅವರಿನ್ನೂ ಯಾವುದೇ ಫೋಟೋ ರಿಲೀಸ್ ಮಾಡಿಲ್ಲ.

- Advertisement -

Related news

error: Content is protected !!