Friday, May 3, 2024
spot_imgspot_img
spot_imgspot_img

ಮಾ. 8 ಮಹಿಳಾ ದಿನಾಚರಣೆಯ ಪ್ರಯುಕ್ತ ‘ವಿ ಕೇರ್ ಲ್ಯಾಬೊರೇಟರೀಸ್’ ನಲ್ಲಿ ಉಚಿತ ತಪಾಸಣ ಶಿಬಿರ

- Advertisement -G L Acharya panikkar
- Advertisement -

ಪುತ್ತೂರು: ಶೀಘ್ರ ಫಲಿತಾಂಶ ಮತ್ತು ಗುಣಮಟ್ಟದ ಸೇವೆಯ ಮೂಲಕ ಜನತೆಯ ವಿಶ್ವಾಸ ಗಳಿಸಿಕೊಂಡಿರುವ `ವಿ ಕೇರ್ ಲ್ಯಾಬೊರೇಟರೀಸ್’ನ ಎಲ್ಲಾ ಶಾಖೆಗಳಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾ.8 ರಂದು ಉಚಿತ ಮಧುಮೇಹ , ರಕ್ತ ದೊತ್ತಡ, ಇ ಸಿ ಜಿ ಥೈರೋಡ್ (50% ಡಿಸ್ಕೌಂಟ್ )ತಪಾಸಣಾ ಶಿಬಿರ ನಡೆಯಲಿದೆ.

vtv vitla
vtv vitla

ಒಳತ್ತಡ್ಕದ ಉದ್ಯಮಿ ಕೆ.ಪಿ. ನವಾಜ್ ಮಾಲಕತ್ವದಲ್ಲಿ, ರಿಸಲ್ಟ್ ಯು ಕ್ಯಾನ್ ಬಿಲೀವ್ ಇನ್’ ಎನ್ನುವ ಸ್ಲೋಗನ್‌ನೊಂದಿಗೆ ಕಾರ್ಯಾಚರಿಸುತ್ತಿರುವವಿ ಕೇರ್ ಲ್ಯಾಬೊರೇಟರೀಸ್’ನ ಪ್ರಥಮ ಶಾಖೆಯು ಕಳೆದ ೨ ವರ್ಷಗಳಿಂದ ವಿಟ್ಲದ ಮೋತಿ ಸಿಟಿ ಕಾಂಪ್ಲೆಕ್ಸ್ನಲ್ಲಿ ಮತ್ತು ಕಳೆದ 1 ವರ್ಷದಿಂದ ಪುತ್ತೂರು ಕಲ್ಲಾರೆ ಮುಖ್ಯ ರಸ್ತೆಯ ಶ್ರೀನಿವಾಸ್ ಫ್ಲಾಜದಲ್ಲಿ ಕಾರ್ಯಾಚರಿಸುತ್ತಿದೆ. ರಕ್ತ, ಮೂತ್ರ, ಮಲ, ಕಫದ ಮಾದರಿಗಳ ೫೦೦ಕ್ಕೂ ಹೆಚ್ಚು ವಿಧದ ತಪಾಸಣಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದಕ್ಕಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಅತ್ಯಾಧುನಿಕ, ಸುಸಜ್ಜಿತ ಯಂತ್ರೋಪಕರಣಗಳನ್ನು ಲ್ಯಾಬ್ ಹೊಂದಿದೆ. ಕಂಪ್ಲೀಟ್ ಬ್ಲಡ್ ಸೆಲ್ ಕೌಂಟ್ ಮಾಡುವಂತಹ ಜಪಾನ್‌ನಿಂದ ಆಮದಿತ ೫-ಪಾರ್ಟ್ ಹೆಮಟಾಲಜಿ ಅನಲೈಸರ್, ಥೈರಾಯ್ಡ್, ಫರ್ಟಿಲಿಟಿ ಹಾರ್ಮೋನ್ಸ್, ವಿಟಮಿನ್ ಡಿ ಟೋಟಲ್, ಟೋಟಲ್ ಐಜಿಇ ಲೆವೆಲ್, ಎಸ್.ಫೆರಿಟಿನ್, ಆಂಟಿ ಟಿಪಿಒ ಆಂಟಿಬಾಡೀಸ್‌ಗಳನ್ನು ತಪಾಸಣೆ ಮಾಡುವಂತಹ ಇಟಲಿಯಿಂದ ಆಮದಿತ ಹಾರ್ಮೋನ್ಸ್ ಇಮ್ಯೂನೋಸ್ಸೇ ಮೆಷಿನ್, ಜಪಾನ್‌ನಿಂದ ಆಮದು ಮಾಡಿಕೊಳ್ಳಲಾದ ಎಲೆಕ್ಟ್ರೋಸೈಟ್ ಸೆಡಿಮೆಂಟೇಷನ್ ರೇಟ್ ತಿಳಿಯುವ ಇಎಸ್‌ಆರ್ ಅನಲೈಸರ್, ಎಲೆಕ್ಟ್ರೋಲೈಟ್ ಅನಲೈಸರ್, ನೆಬ್ಯೂಲೈಸರ್, ಯುರೋಪ್‌ನ ನಾರ್ವೆಯಿಂದ ತರಿಸಿದ ಬ್ಲಡ್ ಶುಗರ್ ಲೆವೆಲ್ ತಿಳಿಯುವ ಅಬೋಟ್ ಹೆಬಿಎ೧ಸಿ ಮೆಷಿನ್, ಲಿವರ್ ಮತ್ತು ಕಿಡ್ನಿಯ ಲಿಪಿಡ್ ಪ್ರೊಫೈಲ್ ತಿಳಿಯುವ ಬಯೋಕೆಮಿಸ್ಟ್ರಿ ಮೆಷಿನ್ ಮತ್ತು ಥ್ರೀ ಚಾನೆಲ್ ಇಸಿಜಿ ರೆಕಾರ್ಡರ್ ಇತ್ಯಾದಿ ವ್ಯವಸ್ಥೆಗಳನ್ನು `ವಿ ಕೇರ್ ಲ್ಯಾಬೊರೇಟರೀಸ್’ ಹೊಂದಿದೆ.

ಗ್ರಾಹಕರ ಅನುಕೂಲಕ್ಕಾಗಿ ಸಂಸ್ಥೆಯಲ್ಲಿ ವಿವಿಧ ರಕ್ತಪರೀಕ್ಷಾ ಪ್ಯಾಕೇಜ್‌ಗಳು ಲಭ್ಯವಿದೆ. ಜೊತೆಗೆ ತಪಾಸಣೆ ಮಾಡಿದ ರಿಪೋರ್ಟ್ಗಳು ಎಸ್‌ಎಂಎಸ್ ಅಲರ್ಟ್ ಮತ್ತು ಇಮೇಲ್ ಮೂಲಕವೂ ಲಭಿಸಲಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 8.30ರವರೆಗೆ ಲ್ಯಾಬ್ ಕಾರ್ಯಾಚರಿಸಲಿದೆ. ಅಲ್ಲದೆ, ಉಚಿತ ಬ್ಲಡ್ ಶುಗರ್ ಮತ್ತು ಬಿಪಿ ಪರೀಕ್ಷೆಯನ್ನು ಕೂಡ ಸಂಸ್ಥೆಯು ಉಚಿತವಾಗಿ ಮಾಡಿಕೊಡಲಿದೆ. ಅಪಾಯಿಂಟ್‌ಮೆಂಟ್ ಮತ್ತು ಮನೆಯಿಂದಲೇ ಸ್ಯಾಂಪಲ್ ಕಲೆಕ್ಷನ್ ಮಾಡಿಕೊಳ್ಳುವ ವ್ಯವಸ್ಥೆಯೂ ಇಲ್ಲಿದೆ. ಇದೀಗ ಶುಭಾರಂಭದ ಪ್ರಯುಕ್ತ ಕೊಡುಗೆಯಾಗಿ ಎಲ್ಲಾ ಬಗೆಯ ಟೆಸ್ಟ್ಗಳ ಮೇಲೆ ೨೫% ರಿಯಾಯಿತಿ ಲಭಿಸಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.:6363695272 ಸಂಪರ್ಕಿಸಬಹುದಾಗಿದೆ.

- Advertisement -

Related news

error: Content is protected !!