Thursday, April 18, 2024
spot_imgspot_img
spot_imgspot_img

ಮಂಗಳೂರು: 14ವರ್ಷಗಳ ಹಿಂದಿನ ಸರಣಿ ಬಾಂಬ್‌ ಸ್ಫೋಟ ಪ್ರಕರಣ; ಮಂಗಳೂರಿನ ಇಬ್ಬರಿಗೆ ಗಲ್ಲು ಶಿಕ್ಷೆ..!

- Advertisement -G L Acharya panikkar
- Advertisement -
vtv vitla
vtv vitla

ಮಂಗಳೂರು: ಗುಜರಾತಿನ ಅಹಮದಾಬಾದ್‌ನಲ್ಲಿನ 14ವರ್ಷಗಳ ಹಿಂದಿನ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಇತ್ತೀಚೆಗೆ ಕೋರ್ಟ್ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ವೇಳೆ ಶಿಕ್ಷೆಗೆ ಗುರಿಯಾದವರಲ್ಲಿ ಇಬ್ಬರು ಮಂಗಳೂರಿನವರು ಸೇರಿದ್ದಾರೆ.

56 ಮಂದಿಯನ್ನು ಬಲಿ ಪಡೆದ ಕೇಸ್ ಗೆ ಸಂಬಂಧಿಸಿ 38 ಮಂದಿಗೆ ಇತ್ತೀಚೆಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. 38 ಮಂದಿಯ ಪೈಕಿ ಇಬ್ಬರು ಕನ್ನಡಿಗರು ಮಂಗಳೂರಿನ ಮೊಹಮದ್‌ ನೌಷಾದ್‌ ಹಾಗೂ ಅಹಮದ್‌ ಬಾವಾ ಸೇರಿದ್ದಾರೆ.

ಈ ಇಬ್ಬರೂ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಎಂಜಿನಿಯರಿಂಗ್‌ ವಿದ್ಯಾರ್ಥಿ ನೌಷಾದ್‌ ಮಂಗಳೂರಿನ ಪಾಂಡೇಶ್ವರದ ಸುಭಾಷ್‌ನಗರದಲ್ಲಿ ವಾಸಿಸುತ್ತಿದ್ದ. ಪೊಲೀಸರು 2008ರ ಅಕ್ಟೋಬರ್‌ 3ರ ಮುಂಜಾನೆ ಆತನನ್ನು ಬಂಧಿಸಿದ್ದರು.

ನೌಷಾದ್‌ನ ಸುಭಾಷ್‌ನಗರದ ಮನೆಯನ್ನು ಇಂಡಿಯನ್‌ ಮುಜಾಹಿದೀನ್‌ ಉಗ್ರರು ಸಮಾಲೋಚನೆ ನಡೆಸುವ ತಾಣವಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಇನ್ನು ಇವರೊಂದಿಗೆ ಒಡನಾಟ ಹೊಂದಿದ್ದ ಉಡುಪಿ ಮೂಲದ ವ್ಯಕ್ತಿ ಫಕೀರ್ ಅಹ್ಮದ್ ಎಂಬಾತನಿಗೂ ಜಿಲ್ಲಾ ನ್ಯಾಯಲಾಯವು 2017ರಲ್ಲಿ ಜೀವಾವಧಿ ಜೈಲು ಶಿಕ್ಷೆ ವಿಧಿಸಿತ್ತು.

ಜುಲೈ 2008 ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಕರಣದ ಸಂಬಂಧ ವಿಶೇಷ ನ್ಯಾಯಾಲಯವು ಅಪರಾಧಿಗಳಿಗೆ ಫೆ.18 ರಂದು ಶಿಕ್ಷೆ ಪ್ರಮಾಣ ಪ್ರಕಟಿಸಿತ್ತು. ನ್ಯಾಯಾಲಯವು 49 ಅಪರಾಧಿಗಳಲ್ಲಿ 38 ಮಂದಿಗೆ ಮರಣದಂಡನೆ ವಿಧಿಸಿದ್ದು, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

- Advertisement -

Related news

error: Content is protected !!