Thursday, May 9, 2024
spot_imgspot_img
spot_imgspot_img

ಮಿಕ್ಸಿ ಸ್ಪೋಟ ಪ್ರಕರಣಕ್ಕೆ ಟ್ವಿಸ್ಟ್‌; ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಲ್ಲಲು ಸಂಚು ಹೂಡಿದ್ದ ಪಾಗಲ್‌ ಪ್ರೇಮಿ

- Advertisement -G L Acharya panikkar
- Advertisement -

ಹಾಸನ: ಕೊರಿಯರ್ ಅಂಗಡಿಯಲ್ಲಿ ಸಂಭವಿಸಿದ ಮಿಕ್ಸಿ ಬ್ಲಾಸ್ಟ್‌ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಭಗ್ನ ಪ್ರೇಮಿಯೊಬ್ಬನ ತನ್ನ ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಲ್ಲಲು ಮಿಕ್ಸಿಯಲ್ಲಿ ಸ್ಪೋಟಕ ಇಟ್ಟು ಪಾರ್ಸೆಲ್‌ ಕಳುಹಿಸಿದ ಕೃತ್ಯ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ನಗರದ ಕೆ.ಆರ್. ಪುರಂ ಸಬ್ ರಿಜಿಸ್ಟ್ರಾರ್ ಕಚೇರಿ ರಸ್ತೆಯ ಅಂಗಡಿಯಲ್ಲಿ ಸೋಮವಾರ ಸಂಜೆ ಮಿಕ್ಸಿ ಸ್ಫೋಟಗೊಂಡು ಆತಂಕಕ್ಕೆ ಕಾರಣವಾಗಿತ್ತು. ಇದು ಉಗ್ರ ಕೃತ್ಯ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುದ್ದಿಗೋಷ್ಠಿ ನಡೆಸಿ ಉಗ್ರ ಕೃತ್ಯವಲ್ಲ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆಸಿರುವ ಸ್ಫೋಟ ಎಂಬ ಮಾಹಿತಿ ನೀಡಿದ್ದಾರೆ. ಸಂಪೂರ್ಣ ತನಿಖೆ ನಡೆಸಿರುವ ಪೊಲೀಸರು ಇದು ಪಾಗಲ್ ಪ್ರೇಮಿಯೊಬ್ಬನ ಕೃತ್ಯ ಎಂಬುದನ್ನು ಬಯಲಿಗೆಳೆದಿದ್ದಾರೆ.

ಬೆಂಗಳೂರಿನ ಯುವಕನೊಬ್ಬ ಹಾಸನದ ವಿಚ್ಛೇದಿತ ಮಹಿಳೆಯೊಬ್ಬಳ ಹಿಂದೆ ಬಿದ್ದಿದ್ದ. ಆದರೆ, ಆತನ ಪ್ರೀತಿಯನ್ನು ಆಕೆ ನಿರಾಕರಿಸಿದಳು. ಈ ಕುರಿತಾಗಿ ಇಬ್ಬರ ನಡುವೆ ಗಲಾಟೆಯೂ ಆಗಿತ್ತು. ಎರಡು ಬಾರಿ ತನ್ನ ವಿಳಾಸ ಬರೆಯದೆ ಮಹಿಳೆಯ ವಿಳಾಸಕ್ಕೆ ಕೊರಿಯರ್ ಮೂಲಕ ಕೆಲವು ವಸ್ತುಗಳನ್ನು ಕಳುಹಿಸಿದ. ಆಕೆ ಅದನ್ನು ಕಸದ ಬುಟ್ಟಿಗೆ ಹಾಕಿದಳು. ಇದರಿಂದ ಕೋಪಗೊಂಡು ಆತ ಉಗ್ರ ರೀತಿಯಲ್ಲಿ ಪ್ಲಾನ್ ಮಾಡಿ ಆಕೆಯನ್ನು ಕೊಲ್ಲಲು ಮಿಕ್ಸರ್‌ನಲ್ಲಿ ಸ್ಫೋಟಕವನ್ನು ಇಟ್ಟು ಕಳುಹಿಸಿದ.

ಅಡ್ರೆಸ್ ಇಲ್ಲದ ಬಂದ ಕೊರಿಯರ್ ಅನ್ನು ಮಹಿಳೆ ಎಸೆಯದೇ ಪುನಃ ಕೊರಿಯರ್ ಶಾಪ್‌ಗೆ ತಂದುಕೊಟ್ಟು ಅದನ್ನು ವಾಪಸ್‌ ಮಾಡುವಂತೆ ಹೇಳಿದಳು. ಶಾಪ್ ಮಾಲೀಕ ಶಶಿ ವಾಪಸ್ ಕಳುಹಿಸಲು 350 ರೂಪಾಯಿ ಶುಲ್ಕ ಕೇಳಿದ, ಹಣ ಕೊಡಲು ನಿರಾಕರಿಸಿದ ಮಹಿಳೆ ಇದು ನನಗೆ ಸಂಬಂಧಪಟ್ಟಿದ್ದಲ್ಲ, ನೀವು ಏನಾದರೂ ಮಾಡಿ ಎಂದು ಹೊರ ನಡೆದಿದ್ದಳು. ಮಾಲೀಕ ಆ ಪಾರ್ಸೆಲ್ ಬಾಕ್ಸ್‌ನಲ್ಲಿ ಏನಿದೆ ಎಂದು ಕುತೂಹಲದಿಂದ ತೆರೆದು ನೋಡಿದಾಗ ಮಿಕ್ಸಿ ಇತ್ತು. ಅದನ್ನು ಪರಿಶೀಲನೆ ಮಾಡಲು ಸ್ಪೀಚ್ ಹಾಕಿದಾಗ ಮಿಕ್ಸಿ ಬ್ಲಾಸ್ಟ್ ಆಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.

- Advertisement -

Related news

error: Content is protected !!