Saturday, April 20, 2024
spot_imgspot_img
spot_imgspot_img

ಮಿತ್ತೂರು: ಗೋವುಗಳನ್ನು ಕಳೆದುಕೊಂಡ ಕುಟುಂಬಸ್ಥರ ಮನೆಗೆ ಹಿಂಜಾವೇ ಪ್ರಮುಖರ ಬೇಟಿ; ಸೂಕ್ತ ಕ್ರಮಕ್ಕೆ ಒತ್ತಾಯ

- Advertisement -G L Acharya panikkar
- Advertisement -

ಮಿತ್ತೂರು: ಫೆ. 18 ರಂದು ಮಿತ್ತೂರಿನಲ್ಲಿ ದುಷ್ಕರ್ಮಿಗಳು ದನವನ್ನು ಕಳ್ಳತನ ಮಾಡಿದ ಘಟನೆ ನಡೆದಿದ್ದು ಸಂತ್ರಸ್ಥರ ಮನೆಗೆ ಹಿಂದೂ ಜಾಗರಣ ವೇದಿಕೆಯ ಪ್ರಮುಖರು ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.

ದುಷ್ಕರ್ಮಿಗಳ ತಂಡವೊಂದು ವಾಹನದಲ್ಲಿ ಬಂದು ಮಿತ್ತೂರಿನ ದಾಮೋದರ ಎಂಬವರಿಗೆ ಸೇರಿದ ಎರಡು ದನವನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಲು ಕೊಡುವ 50 ಸಾವಿರ ಮೌಲ್ಯದ ಹಸು ಮತ್ತು 25 ಸಾವಿರ ಮೌಲ್ಯದ ದನ ಕಳ್ಳತನ ಆಗಿದೆ.

ಮಿತ್ತೂರು ಇಡ್ಕಿದು ಪರಿಸರದಲ್ಲಿ ಆಗಿದ್ದಾಂಗೆ ಗೋ ಕಳ್ಳತನ ಜಾಸ್ತಿಯಾಗುತ್ತಿದೆ. ಮಿತ್ತೂರಿನಲ್ಲಿಯೇ ಒಟ್ಟು 5 ದನಗಳು ಕಳುವಾಗಿದ್ದು ಒಂದೇ ಪ್ರಕರಣ ದಾಖಲಾಗಿರುತ್ತದೆ. ಉಳಿದ ಪ್ರಕರಣಗಳು ದಾಖಲಾಗಿಲ್ಲ. ಕಳ್ಳತನಕ್ಕೆ ಸ್ಥಳೀಯರದ್ದೇ ಕುಮ್ಮಕ್ಕು ಇದೆ ಎಂದು ಹೇಳಲಾಗುತ್ತಿದೆ. ಜೀವನೋಪಾಯಕ್ಕೆ ದನಗಳನ್ನು ಸಾಕಿಕೊಂಡು ಬದುಕು ಸಾಗಿಸುವ ಕುಟುಂಬಕ್ಕೆ ಮುಖಂಡರು ಧೈರ್ಯ ತುಂಬಿದ್ದಾರೆ.

ಸೂಕ್ತ ಕ್ರಮಕ್ಕೆ ಒತ್ತಾಯ..!
ದನಗಳನ್ನು ಜೀವನೋಪಾಯಕ್ಕೆ ಸಾಕಿಕೊಂಡು ಬಂದ ಕುಟುಂಬ ಈಗ ಸಮಸ್ಯೆಗೆ ಸಿಲುಕಿದೆ. ಕೂಡಲೇ ಕಳ್ಳರನ್ನು ಪೊಲೀಸರು ಬಂಧಿಸಬೇಕು. ಜಿಲ್ಲಾಡಳಿತ ಸಂತ್ರಸ್ಥರಿಗೆ ಪರಿಹಾರ ನೀಡಬೇಕು. ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದೆ ಹಿಂದೂ ಜಾಗರಣ ವೇದಿಕೆಯೇ ಹೋರಾಟ ಮಾಡುತ್ತದೆ. ಮುಂದೆ ಆಗುವ ಯಾವುದಕ್ಕೂ ಹಿಂಜಾವೇ ಹೊಣೆಯಲ್ಲ ಎಂದು ಮುಖಂಡರು ತಿಳಿಸಿದ್ದಾರೆ.

ಈ ವೇಳೆ ಜಿಲ್ಲಾ ಸಹ ಸಂಚಾಲಕ್ ನರಸಿಂಹ ಶೆಟ್ಟಿ ಮಾಣಿ, ತಾಲೂಕು ಹಿಂದೂ ಯುವ ವಾಹಿನಿ ಸಹ ಪ್ರಮುಖ್‌ ನವೀನ್ ಕೋಲ್ಪೆ, ಜಗದೀಶ್ ದೇವಸ್ಯ, ಶರಣ್, ಹಿಮಾಕರ್‍ ಸೇರಿದಂತೆ ಕುಟುಂಬಸ್ಥರು ಜೊತೆಗಿದ್ದರು.

- Advertisement -

Related news

error: Content is protected !!