Wednesday, April 24, 2024
spot_imgspot_img
spot_imgspot_img

ಮೀನಿನ ಮುಳ್ಳು ಗಂಟಲಿನಲ್ಲಿ ಸಿಲುಕಿಕೊಂಡರೆ, ಕೂಡಲೇ ಈ ಟ್ರಿಕ್ಸ್ ಫಾಲೋ ಮಾಡಿ

- Advertisement -G L Acharya panikkar
- Advertisement -

ಉಡುಪಿ ಹಾಗೂ ದಕ್ಷಿಣ ಕನ್ನಡದವರು ಅಂದರೆ ಕರಾವಳಿ ಭಾಗದವರು ಹಾಗೂ ಪಶ್ಚಿಮ ಬಂಗಾಳದವರ ಜನರಿಗೆ ಮೀನಿನ ಊಟ ಅಂದರೆ ಪಂಚಪ್ರಾಣವಂತೆ! ಇಲ್ಲಿನ ಜನ ಚಿಕನ್‌ ಕರಿಗಿಂತಲೂ ಮೀನಿನ ಕರಿಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅದರಲ್ಲೂ ಕರಾವಳಿ ಕಡೆಯಲ್ಲಿರುವ ಜನರಿಗಂತೂ ವಾರಕ್ಕೆ ಎರಡೂ ಬಾರಿಯಾದರೂ ಮೀನಿನ ಅಡುಗೆ ಬೇಕೇ ಕೇಕು. ಮೀನಿನ ಸಾರು ಇಲ್ಲದೆ ಇದ್ದರೆ, ನನಗೆ ಆಗ ಊಟನೇ ಸೇರಲ್ಲ ಎನ್ನುವವರು ಎಷ್ಟೋ ಜನ ಇದ್ದಾರೆ.

ಒಂದು ಲೆಕ್ಕದಲ್ಲಿ ನೋಡಿದರೆ, ಇದು ಒಳ್ಳೆಯದೇ! ಮಿತವಾಗಿ ಮೀನು ಸೇವನೆ ಮಾಡುವುದ ರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಮುಖ್ಯವಾಗಿ ಇದರಲ್ಲಿ ಕಂಡುಬರುವ ಕೆಲವೊಂದು ಪೋಷಕಾಂಶಗಳು ಹಾಗೂ ಕೊಬ್ಬಿನಾಮ್ಲವು ಆರೋಗ್ಯಕ್ಕೆ ತುಂಬಾ ಲಾಭಕಾರಿ. ವಿಶೇಷವಾಗಿ ಮೀನಿನಲ್ಲಿರುವ ಮೀನೆಣ್ಣೆ ಅಥವಾ ಒಮೆಗಾ -3 ಕೊಬ್ಬಿನ ಆಮ್ಲಗಳು ಹೃದಯದ ಆರೋಗ್ಯದ ಬಹಳ ಒಳ್ಳೆಯದು.

ನೋಡಿ ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಮೀನನ್ನು ತಿನ್ನುವಾಗ , ಮಾತ್ರ ಸ್ವಲ್ಪ ಜಾಗರೂಕತೆಯಿಂದ ಸೇವಿಸಬೇಕು. ಯಾಕೆಂದರೆ ಕೆಲವೊಂದು ಮೀನಿನಲ್ಲಿ ಅಧಿಕ ಪ್ರಮಾಣದಲ್ಲಿ ಮುಳ್ಳುಗಳು ಕಂಡು ಬರುವುದರಿಂದ, ಊಟ ಮಾಡುವ ಸಂದರ್ಭದಲ್ಲಿ , ಈ ಮುಳ್ಳುಗಳು ಗಂಟಲು ಅಥವಾ ಅನ್ನನಾಳದಲ್ಲಿ ಸಿಲುಕಿಕೊಳ್ಳುವ ಸಂಭವ ಹೆಚ್ಚಿರುತ್ತದೆ.

ಆಕಸ್ಮಾತ್ ಆಗಿ ಮೀನಿನ ಮುಳ್ಳು ಹೊಟ್ಟೆಗೆ ಹೋದರೆ ಸಮಸ್ಯೆ ಇದೆಯಾ?

ಸಾಮಾನ್ಯವಾಗಿ ಕೆಲವೊಂದು ಮೀನಿನಲ್ಲಿ ಅಧಿಕ ಪ್ರಾಮಾಣದಲ್ಲಿ ಮುಳ್ಳುಗಳು ಕಂಡು ಬರುವುದರಿಂದ, ಆದಷ್ಟು ಜಾಗರೂಕತೆಯಿಂದ ತಿನ್ನಬೇಕು. ಮೆಲ್ಲನೇ ಮುಳ್ಳನ್ನು ಬಿಡಿಸಿ, ಅದರ ಮಾಂಸವನ್ನು ಮಾತ್ರವೇ ತಿನ್ನ ಬೇಕು. ಆದರೆ, ಕೆಲವೊಮ್ಮೆ ಅಕಸ್ಮಾತ್ತಾಗಿ, ಅನ್ನದ ಜೊತೆಗೆ ಹೊಟ್ಟೆಗೆ ಹೋಗಿಬಿಡಬಹುದು.
ಆದರೆ ತಜ್ಞರು ಹೇಳುವ ಪ್ರಕಾರ ಮೀನಿನ ಮುಳ್ಳು ನಮ್ಮ ಜಠರದಲ್ಲಿಯೇ ಜೀರ್ಣಗೊಳ್ಳುವುದರಿಂದ, ಹೊಟ್ಟೆಯ ಕರುಳುಗಳಿಗೆ ಇದರಿಂದ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ.

ಆದರೆ, ಸಮಸ್ಯೆ ಕಂಡುಬರುವುದು ಹೊಟ್ಟೆಗೆ ಹೋಗುವ ಹಂತದಲ್ಲಿ, ಅಂದರೆ ಗಂಟಲು ಅಥವಾ ಅನ್ನನಾಳ ದಲ್ಲಿ ಚುಚ್ಚಿಕೊಂಡಾಗ ಮಾತ್ರ. ಇದರಿಂದ ನುಂಗುವ ಪ್ರತಿ ತುತ್ತೂ ಈ ಮುಳ್ಳಿಗೆ ಚುಚ್ಚುತ್ತಾ ಇನ್ನಷ್ಟು ನೋವುಂಟು ಮಾಡುತ್ತದೆ. ಒಂದು ವೇಳೆ ಈ ಸಮಸ್ಯೆ ನಿಮಗೂ ಆಗಿದ್ದರೆ, ಇಲ್ಲಿದೆ ನೋಡಿ ಕೆಲವೊಂದು ಸಿಂಪಲ್ ಟಿಪ್ಸ್

ಮುಳ್ಳು ಹೊಟ್ಟೆಗೆ ಹೋದ ಮೇಲೇನಾಗುತ್ತದೆ?

ತಜ್ಞರು ಹೇಳುವ ಪ್ರಕಾರ, ಸಾಮಾನ್ಯವಾಗಿ ಮೀನಿನ ಮುಳ್ಳು, ನೇರವಾಗಿ ನಮ್ಮ ಹೊಟ್ಟೆಗೆ ಸೇರಿ ಕೊಂಡರೆ ಏನೂ ಸಮಸ್ಯೆ ಇಲ್ಲ. ಸಾಮಾನ್ಯವಾಗಿ ಮುಳ್ಳುಗಳು ನಮ್ಮ ಜಠರದಲ್ಲಿ ಜೀರ್ಣ ಗೊಳ್ಳುತ್ತವೆ. ಕೆಲವು ಮೀನಿನ ದಪ್ಪ ಮುಳ್ಳು ಗಳು ಜಠರದಿಂದ ಸಣ್ಣಕರುಳಿಗೆ, ಸಾಗಿ ಅಲ್ಲಿಯೇ ಜೀರ್ಣಗೊಳ್ಳುತ್ತದೆ. ಒಂದು ವೇಳೆ ಇದು ಮುಳ್ಳು ಕರುಳಿನಲ್ಲಿಯೇ ಉಳಿದರೂ, ನಮ್ಮ ಆಹಾರದಲ್ಲಿರುವ ನಾರಿನಾಂಶದ ಕಾರಣದಿಂದಾಗಿ, ಮಲ ವಿಸರ್ಜನೆಯ ಮೂಲಕ ಹೊರ ಹೋಗುತ್ತದೆ.

ಮೀನಿನ ಮುಳ್ಳು ಗಂಟಲಿನಲ್ಲಿ ಸಿಲುಕಿ ಕೊಂಡರೆ, ಬಾಳೆಹಣ್ಣು ತಿನ್ನಿ

ಒಂದು ವೇಳೆ ಗಂಟಲಿನಲ್ಲಿ ಅಥವಾ ಅನ್ನನಾಳದ ಭಾಗದಲ್ಲಿ ಮೀನಿನ ಮುಳ್ಳು ಸಿಲುಕಿ ಕೊಂಡರೆ ಒಂದು ಮಧ್ಯಮ ಗಾತ್ರದ ಮಾಗಿದ ಬಾಳೆಹಣ್ಣನ್ನು ತಿನ್ನಿ. ಇಲ್ಲಾಂದರೆ ಬಾಳೆಹಣ್ಣಿನ ಒಂದಿಂಚಿನಷ್ಟಿರುವ ಬಾಳೆಹಣ್ಣಿನ ಸಣ್ಣ ತುಂಡ ನ್ನು ನೇರವಾಗಿ ನುಂಗಿ ಬಿಡಿ. ಬಳಿಕ ಒಂದು ಲೋಟ ನೀರು ಕುಡಿಯಿರಿ. ಹೀಗೆ ಒಂದೆರಡು ಬಾರಿ ಮಾಡಿದರೆ, ಸಣ್ಣ ಮತ್ತು ಮಧ್ಯಮ ಗಾತ್ರದ ಮುಳ್ಳು ಬೇಗನೇ ನಿವಾರಣೆಯಾಗುತ್ತದೆ.

ಶೇಂಗಾಬೀಜ

ಚೆನ್ನಾಗಿ ಹುರಿದು ರೋಸ್ಟ್ ಮಾಡಿರುವ, ಸ್ವಲ್ಪ ಶೇಂಗಾಬೀಜಗಳನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ, ಆ ಬಳಿಕ ನುಂಗಿಬಿಡಿ. ಈ ವಿಧಾನದಿಂದಲೂ ಗಂಟಲಲ್ಲಿ ಸಿಲುಕಿಕೊಂಡಿದ್ದ ಮುಳ್ಳು ನಿವಾರಣೆಯಾಗುತ್ತದೆ.

ಪೀನಟ್ ಬಟರ್

ಕಂದು ಬಣ್ಣದ ಬ್ರೆಡ್‌ಗೆ, ಒಂದು ಸಣ್ಣ ಚಮಚ ಪೀನಟ್ ಬಟರ್, ಸವರಿ, ಬಾಯಿಗೆ ಹಾಕಿ ಕೊಂಡು ಚೆನ್ನಾಗಿ ಅಗಿದು, ಆಮೇಲೆ ನುಂಗಿ ಬಿಡಿ. ಬಳಿಕ ಒಂದು ಲೋಟ ನೀರು ಕುಡಿಯಿರಿ. ಈ ವಿಧಾನದಿಂದಲೂ ಗಂಟಲ ಮುಳ್ಳು ನಿವಾರಣೆ ಯಾಗುತ್ತದೆ.

ಒಂದು ವೇಳೆ ಮುಳ್ಳು ನಿವಾರಣೆ ಆಗದೇ ಇದ್ದರೆ…

ಒಂದು ವೇಳೆ ಮುಳ್ಳು ನಿವಾರಣೆಯಾಗದೇ ಇದ್ದರೆ, ಊಟ ಮಾಡುವಾಗ, ಗಂಟಲಿನಲ್ಲಿ ಅಥವಾ ಅನ್ನನಾಳದಲ್ಲಿ ನೋವು ಉಂಟಾಗಿದ್ದರೆ, ಕೂಡಲೇ ವೈದ್ಯರನ್ನು ಭೇಟಿ ಮಾಡಿ, ಪರೀಕ್ಷೆಗೆ ಒಳಗಾಗಿ…ಈ ವಿಷ್ಯದಲ್ಲಿ ತಡಮಾಡಬೇಡಿ.
ಏಕೆಂದರೆ ಮೀನಿನ ಮುಳ್ಳು ಹಾಗೇ ಉಳಿದರೆ ಆ ಭಾಗದಲ್ಲಿ ಸೋಂಕು ಎದುರಾಗಬಹುದು. ಇನ್ನು ಮುಳ್ಳು ಗಂಟಲಿನ ಆಳದಲ್ಲಿ ಅಂದರೆ ಅನ್ನನಾಳದ ಭಾಗದಲ್ಲಿ ಚುಚ್ಚಿಕೊಂಡಿದ್ದರೆ, ಸಣ್ಣ ಶಸ್ತ್ರಚಿಕಿತ್ಸೆ ಮಾಡುವ, ಸಂಭವ ಕೂಡ ಕಂಡು ಬರಬಹುದು.

- Advertisement -

Related news

error: Content is protected !!