Friday, April 26, 2024
spot_imgspot_img
spot_imgspot_img

ಮುಂಬೈಗೆ ಬಂದ ಉಗಾಂಡ ಪ್ರಜೆಯ ಹೊಟ್ಟೆಯಲ್ಲಿ ಬರೊಬ್ಬರಿ 7 ಕೋಟಿ ಮೌಲ್ಯದ ಮಾತ್ರೆ ಪತ್ತೆ

- Advertisement -G L Acharya panikkar
- Advertisement -

ಮುಂಬೈ: ಮುಂಬೈನಲ್ಲಿ ಉಗಾಂಡ ಪ್ರಜೆಯೊಬ್ಬ ಬರೊಬ್ಬರಿ 7 ಕೋಟಿ‌ ಮೌಲ್ಯದ 70 ಕೊಕೇನ್​ ಮಾತ್ರೆಗಳನ್ನು ಸೇವಿಸಿ ಸಾಗಣೆ ಮಾಡುತ್ತಿದ್ದ ಅಚ್ವರಿ ಘಟನೆ ನಡೆದಿದೆ.

ಬ್ರೆಂಡೆನ್​ ಮೆಗದ್ದೆ ಬಂಧಿತ ಉಗಾಂಡ ಪ್ರಜೆ. ಉಗಾಂಡದಿಂದ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬ್ರೆಂಡೆನ್​ ಮೆಗದ್ದೆಯನ್ನು ಡ್ರಗ್ಸ್​ ಸಾಗಣೆ ನಡೆಸುತ್ತಿರುವ ಮಾಹಿತಿಯ ಆಧಾರದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ವೈದ್ಯಕೀಯ ಪರೀಕ್ಷೆ‌ ನಡೆಸಲಾಗಿದೆ.

X-ರೇ, ಸ್ಯ್ಕಾನಿಂಗ್​, ಸೋನೋಗ್ರಫಿ ನಡೆಸಿದಾಗ ಉಗಾಂಡ ವ್ಯಕ್ತಿಯ ಹೊಟ್ಟೆಯಲ್ಲಿ ಸುಮಾರು 70 ಕೊಕೇನ್ ಮಾತ್ರೆಗಳು ಇರುವುದು ಕಂಡು ಬಂದಿದೆ. ಬಳಿಕ ಅವುಗಳನ್ನು ತೆಗೆದ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!