Tuesday, June 9, 2026
spot_imgspot_img
spot_imgspot_img

ಮುಲ್ಕಿ: ಅಂಗಡಿ ಮಾಲೀಕನನ್ನು ಯಾಮಾರಿಸಿ 1.50 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಎಗರಿಸಿದ ಖದೀಮರು…!!

- Advertisement -
- Advertisement -

ಮುಲ್ಕಿ : ಅಂಗಡಿಯ ಮಾಲಕನನ್ನು ಯಾಮಾರಿಸಿ 1.50 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಳವು ಮಾಡಿ ಪರಾರಿಯಾದ ಘಟನೆ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ನಡೆದಿದೆ.

ಮುಲ್ಕಿ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಸಮೀಪದ ಆಭರಣ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಂಗಡಿಯ ಮಾಲಕನನ್ನು ಯಾಮಾರಿಸಿ 1.50 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಳವು ಮಾಡಿ ಪರಾರಿಯಾಗಿದ್ದಾರೆ.

ಶನಿವಾರ ಸಂಜೆ ಸುಮಾರು 5:40ರ ಹೊತ್ತಿಗೆ ಮಲಯಾಳಿ ಭಾಷೆ ಮಾತನಾಡುತ್ತಿರುವ ಸುಮಾರು 46 ವರ್ಷ ಪ್ರಾಯದ ಇಬ್ಬರು ವ್ಯಕ್ತಿಗಳು ಮುಲ್ಕಿ ಬಸ್ ನಿಲ್ದಾಣದ ಬಳಿಯ ಪೆಟ್ರೋ ಲ್ ಬಂಕ್ ಸಮೀಪದ ಸ್ವಸ್ತಿಕ್ ಜುವೆಲರ್‍ಸ್‌ ಎಂಬ ಆಭರಣದ ಅಂಗಡಿಗೆ ಬಂದು ಅದರ ಮಾಲಕ ಪ್ರಕಾಶ್ ಬಳಿ ತಾಯತ ಬೇಕು ಎಂದು ಹೇಳಿದ್ದಾರೆ.

ಈ ಸಂದರ್ಭ ಮಾಲಕ ಪ್ರಕಾಶ್ ಅಂಗಡಿಯ ಒಳಗಿನ ಸಣ್ಣ ಮೇಜಿನ ಡ್ರಾವರ್ ತೆಗೆದು ಹುಡುಕುತ್ತಿರುವಾಗ ಅವರನ್ನು ಬೇರೆ ಕಡೆ ಗಮನ ಸೆಳೆದು ಡ್ರಾವರ್ ನಲ್ಲಿದ್ದ ಸುಮಾರು 30 ಗ್ರಾಂ ಚಿನ್ನವನ್ನು ಎಗರಿಸಿ ತಮಗೆ ಏನು ಬೇಡ ಎಂದು ತಲೆ ಅಲ್ಲಾಡಿಸಿ ಅಂಗಡಿಯ ಹೊರಗೆ ಬಂದು ಆಟೋ ಮೂಲಕ ಮಂಗಳೂರಿಗೆ ಹೋಗುವ ಬಸ್ಸು ನಿಲ್ದಾಣದ ಕಡೆಗೆ ಹೋಗಿ ಪರಾರಿಯಾಗಿದ್ದಾರೆ. ಆಗಂತುಕ ವ್ಯಕ್ತಿಗಳು ಹೋದ ಮೇಲೆ ಅಂಗಡಿಯ ಮಾಲಕ ಪ್ರಕಾಶ್ ಮೇಜಿನ ಡ್ರಾವರ್ ಒಳಗಡೆ ಪರಿಶೀಲಿಸಿದಾಗ ಕಳವು ನಡೆದದ್ದು ಬೆಳಕಿಗೆ ಬಂದಿದ್ದು ಕಳವಾದ ಚಿನ್ನ ದ ಬೆಲೆ ಸುಮಾರು 1.5 ಲಕ್ಷ ಎಂದು ಅಂದಾಜಿಸಲಾಗಿದೆ.

ಕಳವು ಮಾಡಿದ ಆರೋಪಿಗಳು ಮಲಯಾಳಿ ಭಾಷೆಯಲ್ಲಿ ಮಾತನಾಡುತ್ತಿದ್ದು ಅಂಗಡಿಯ ಸಿಸಿ ಕ್ಯಾ ಮರಾದಲ್ಲಿ ಚಹರೆ ಪತ್ತೆಯಾಗಿದೆ. ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರ

- Advertisement -

Related news

error: Content is protected !!