Friday, June 5, 2026
spot_imgspot_img
spot_imgspot_img

ಮೂಡಬಿದಿರೆ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ..!

- Advertisement -
- Advertisement -

ಮೂಡುಬಿದಿರೆ: ಬೆಳುವಾಯಿ ಗ್ರಾಮದ ಮೂಡಾಯಿಕಾಡ್‌ ನಿವಾಸಿ ಈಶ್ವರ (55) ಎ. 9ರಂದು ಕೆಲಸಕ್ಕೆಂದು ಹೊರಹೋದವರು ನಾಪತ್ತೆಯಾಗಿರುವುದಾಗಿ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ವಾಪಸ್‌ ಮನೆಗೆ ಬಾರದೇ ಅತ್ತ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಚಹರೆ: ಸುಮಾರು 5.3 ಅಡಿ ಎತ್ತರ, ಎಣ್ಣೆಗಪ್ಪು ಮೈಬಣ್ಣ , ದುಂಡು ಮುಖ, ಅರೆನರೆತ ಕಪ್ಪು ಮೀಸೆ ಹೊಂದಿರುವ ಈಶ್ವರ ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಅರ್ಧತೋಳಿನ ಶರ್ಟ್‌, ಕಪ್ಪು ಪ್ಯಾಂಟ್‌ ಧರಿಸಿದ್ದರು. ಇವರು ತುಳು, ಕನ್ನಡ ಭಾಷೆ ಬಲ್ಲವರಾಗಿದ್ದು ವೀಳ್ಯದೆಲೆ ಅಡಿಕೆ ತಿನ್ನುವ ಹವ್ಯಾಸದವರು.

- Advertisement -

Related news

error: Content is protected !!