Thursday, October 1, 2026
spot_imgspot_img
spot_imgspot_img

ಮೂಡಬಿದಿರೆ: ಸಿಡಿಲಿನ ಆರ್ಭಟಕ್ಕೆ ಇಬ್ಬರು ಯುವಕರು ಸ್ಥಳದಲ್ಲೆ ಸಾವು; ಮೂವರಿಗೆ ಗಾಯ..!

- Advertisement -
- Advertisement -

ಮೂಡುಬಿದಿರೆ: ಮೂಡಬಿದಿರೆಯ ಪುತ್ತಿಗೆ ಪಂ. ವ್ಯಾಪ್ತಿಯ ಕಂಚಿಬೈಲು ಅರ್ಬಿ ಪ್ರದೇಶದಲ್ಲಿ ಸೋಮವಾರ ಸಂಜೆ ಸಿಡಿಲಿನ ಆರ್ಭಟಕ್ಕೆ ಇಬ್ಬರು ಬಲಿಯಾಗಿದ್ದಾರೆ.

ಯಶವಂತ , ಮಣಿಪ್ರಸಾದ ಎಂಬ ಇಬ್ಬರು ಸಿಡಿಲಿನ ಅಬ್ಬರಕ್ಕೆ‌ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇವರು ಅರ್ಬಿ ಪ್ರದೇಶದಲ್ಲಿ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ.

ಇವರ ಜೊತೆಗಿದ್ದ ಗಣೇಶ, ಸಂದೀಪ ಮತ್ತು ಪ್ರವೀಣ ಎಂಬವರಿಗೂ ಸಿಡಿಲಿನ ಅಬ್ಬರಕ್ಕೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ದ ಬಳಿಕ ನಾಲ್ವರ ಸಾವು

ಸಿಡಿಲಿನ ಅಬ್ಬರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಶುಕ್ರವಾರದಂದು ಪುತ್ತೂರು ತಾಲೂಕಿನ ಓರ್ವರು, ಶನಿವಾರದಂದು ಉಳ್ಳಾಲದ ಓರ್ವರು, ಇಂದು ಮೂಡಬಿದಿರೆಯ ಇಬ್ಬರು ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!