Friday, June 5, 2026
spot_imgspot_img
spot_imgspot_img

ಮೂಲ್ಕಿ: ಆತ್ಮಹತ್ಯೆಗೆ ಶರಣಾದ ಕಾಲೇಜು ಉಪನ್ಯಾಸಕಿ..!!

- Advertisement -
- Advertisement -

ಮೂಲ್ಕಿ: ಕಾಲೇಜು ಉಪನ್ಯಾಸಕಿಯೊಬ್ಬರು ಬೆಡ್ ರೂಮ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಮೂಲ್ಕಿ ಸಮೀಪದ ಎಸ್. ಕೋಡಿ ಎಂಬಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ವಾಮದಪದವು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಸ್.ಕೋಡಿ ನಿವಾಸಿ ಅಮಿತಾ (34) ಎಂದು ಗುರುತಿಸಲಾಗಿದೆ.

ಕಳೆದ ಹನ್ನೆರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆಯು ಬಂಟ್ವಾಳ ತಾಲೂಕಿನ ರಾಯಿಯಲ್ಲಿರುವ ತನ್ನ ತಾಯಿ ಮನೆಯಲ್ಲಿ ಇದ್ದು, ಅಲ್ಲಿಂದಲೇ ಕಾಲೇಜಿಗೂ ತೆರಳುತ್ತಿದ್ದರು ಎನ್ನಲಾಗಿದೆ. ಆದರೆ ಘಟನೆ ನಡೆದ ದಿನ ತಾಯಿ ಮನೆಯಿಂದ ಪತಿ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದು ಹಲವು ಅನುಮಾನಗಳನ್ನು ಉಂಟುಮಾಡಿದೆ.

ಮೃತರು ಪತಿ ಹಾಗೂ ಎಂಟು ವರ್ಷದ ಪುತ್ರಿಯನ್ನು ಅಗಲಿದ್ದು, ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!