Monday, April 29, 2024
spot_imgspot_img
spot_imgspot_img

ಮೃತಪಟ್ಟ ಪತಿಗಾಗಿ ದೇವಸ್ಥಾನವನ್ನೇ ನಿರ್ಮಿಸಿದ ಪತ್ನಿ..!

- Advertisement -G L Acharya panikkar
- Advertisement -

ಹೈದರಾಬಾದ್ : ಮೃತ ಪತಿಗೆ ದೇವಸ್ಥಾನ ನಿರ್ಮಿಸಿ ಪತ್ನಿ ಪೂಜೆ ಮಾಡುತ್ತೀರುವುದು ಆಂಧ್ರಪ್ರದೇಶದ ಪ್ರಕಾಸಂ ಜಿಲ್ಲೆಯಲ್ಲಿ ಕಂಡು ಬಂದಿದೆ. ಪತಿಯೇ ಪರದೈವ ಎಂದು ತನ್ನ ಗಂಡನಲ್ಲಿ ದೇವರನ್ನು ಕಾಣುವ ಅನೇಕ ಮಹಿಳೆಯರು ಈಗಲೂ ಭಾರತದಲ್ಲಿದ್ದಾರೆ.

ಅದರಂತೆ ಇಲ್ಲೊಬ್ಬ ಮಹಿಳೆ ಎಲ್ಲರಿಗಿಂತ ಕೊಂಚ ವಿಭಿನ್ನವಾಗಿದ್ದು, 4 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ತನ್ನ ಪತಿಗಾಗಿ ದೇವಸ್ಥಾನವನ್ನೇ ನಿರ್ಮಿಸಿದ್ದು, ಅದರಲ್ಲಿ ಪತಿಯ ಮೂರ್ತಿ ಇಟ್ಟು ಪ್ರತಿದಿನ ಪೂಜಿಸುತ್ತಿದ್ದಾಳೆ. ಪದ್ಮಾವತಿ ಪತಿ ಅಂಕಿರೆಡ್ಡಿಗಾಗಿ ದೇಗುಲ ನಿರ್ಮಿಸಿದ್ದಾರೆ.

vtv vitla

ತನ್ನ ತಾಯಿ ಅವರ ಪತಿಗೆ ನಮಸ್ಕರಿಸಿ, ಪೂಜೆ ಮಾಡುತ್ತಿರುವುದನ್ನು ಗಮನಿಸಿದ್ದ ಪದ್ಮಾವತಿ ಅದನ್ನು ತಮ್ಮ ಬದುಕಲ್ಲೂ ಅಳವಡಿಸಿಕೊಂಡಿದ್ದು, ಪತಿಯನ್ನು ಮರೆಯಲು ಆಗದೇ ಅವರ ಹೆಸರಿನಲ್ಲಿ ದೇಗುಲ ಕಟ್ಟಿ ಪ್ರತಿದಿನ ಪೂಜಿಸುತ್ತಿದ್ದಾರೆ.

ಅಪಘಾತದಲ್ಲಿ ಅಂಕಿರೆಡ್ಡಿ ಸಾವನ್ನಪ್ಪಿದ ಕೆಲವು ದಿನಗಳ ಬಳಿಕ ಪದ್ಮಾವತಿ ಅವರ ಕನಸಿನಲ್ಲಿ ಅಂಕಿರೆಡ್ಡಿ ಬಂದು ತನಗಾಗಿ ದೇವಸ್ಥಾನ ಕಟ್ಟುವಂತೆ ಹೇಳಿದ್ದನಂತೆ. ಅದಕ್ಕಾಗಿ ದೇವಸ್ಥಾನ ನಿರ್ಮಿಸಿ ಅದರಲ್ಲಿ ಅಂಕಿರೆಡ್ಡಿ ಮೂರ್ತಿ ಪ್ರತಿಷ್ಠಾಪಿಸಿ ದಿನವೂ ಪೂಜೆ ಸಲ್ಲಿಸುತ್ತಿದ್ದಾಳೆ. ನನ್ನ ಪತಿ ಬದುಕಿದ್ದಾಗಲೂ ಅವರನ್ನು ದೇವರೆಂದೇ ಭಾವಿಸಿದ್ದೆ ಎಂದು ಪದ್ಮಾವತಿ ಹೇಳುತ್ತಾರೆ.

- Advertisement -

Related news

error: Content is protected !!