Thursday, April 25, 2024
spot_imgspot_img
spot_imgspot_img

ಮೆಕ್ಸಿಕೋದ ಭಾರತದ ರಾಯಭಾರಿ ಕಚೇರಿಯ ಭದ್ರತಾ ವಿಭಾಗದ ಸಹಾಯಕ ಅಧಿಕಾರಿಯಾಗಿ ಲೋಕೇಶ್‌ ನೇಮಕ

- Advertisement -G L Acharya panikkar
- Advertisement -

ಮೆಕ್ಸಿಕೋ ದೇಶದ ಭಾರತದ ರಾಯಭಾರಿ ಕಚೇರಿಯ ಭದ್ರತಾ ವಿಭಾಗದ ಸಹಾಯಕ ಅಧಿಕಾರಿಯಾಗಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಚೇರಿಯ ಸಾಮಾಜಿಕ ಜಾಲತಾಣ ವಿಭಾಗದ ಹೆಡ್ ಕಾನ್‌ಸ್ಟೇಬಲ್ ಲೋಕೇಶ್ ಅವರನ್ನು ಭಾರತದ ವಿದೇಶಾಂಗ ಇಲಾಖೆ ನೇಮಕಗೊಳಿಸಿದೆ.

ಈ ಆದೇಶದ ಹಿನ್ನಲೆಯಲ್ಲಿ ಮೆಕ್ಸಿಕೋ ರಾಯಭಾರಿ ಕಚೇರಿಯಲ್ಲಿ ಲೋಕೇಶ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ವಿದೇಶಗಳಲ್ಲಿರುವ ರಾಯಭಾರಿ ಕಚೇರಿಗಳ ಭದ್ರತಾ ವಿಭಾಗಕ್ಕೆ ರಾಜ್ಯಗಳಿಂದ ನುರಿತ ಹಾಗೂ ಚಾಣಾಕ್ಷ ಪೊಲೀಸರನ್ನು ವಿದೇಶಾಂಗ ಇಲಾಖೆ ಆಯ್ಕೆ ಮಾಡುತ್ತದೆ. ಈ ಪದವಿಗೆ 3-4 ವರ್ಷಗಳ ಸೇವಾವಧಿ ಇರುತ್ತದೆ. ಕಳೆದ ವರ್ಷ ರಾಯಭಾರಿ ಕಚೇರಿಗೆ ಆಯ್ಕೆ ಪ್ರಕ್ರಿಯೆಯನ್ನು ವಿದೇಶಾಂಗ ಇಲಾಖೆ ನಡೆಸಿತು.

ಆಗ ರಾಜ್ಯದಿಂದ ಲೋಕೇಶ್ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳ ಹೆಸರನ್ನು ಡಿಜಿಪಿ ಪ್ರವೀಣ್ ಸೂದ್ ಶಿಫಾರಸು ಮಾಡಿದ್ದರು. ಈ ಎಲ್ಲ ಪೊಲೀಸರಿಗೆ 2 ಹಂತದ ಸಂದರ್ಶನ ನಡೆಸಿದ ವಿದೇಶಾಂಗ ಇಲಾಖೆ ಕೊನೆಗೆ ಲೋಕೇಶ್ ಅವರನ್ನು ಆಯ್ಕೆ ಮಾಡಿ ಮೆಕ್ಸಿಕೋ ರಾಯಭಾರಿ ಕಚೇರಿಯ ಭದ್ರತಾ ವಿಭಾಗದ ಸಹಾಯಕರಾಗಿ ನಿಯೋಜಿಸಿದೆ.

- Advertisement -

Related news

error: Content is protected !!