Sunday, May 5, 2024
spot_imgspot_img
spot_imgspot_img

ಮೈರ-ಎರುಂಬು-ತಾಳಿಪಡ್ಪು ರಸ್ತೆ ಅಗಲೀಕರಣ ಮತ್ತು ಕಾಂಕ್ರೀಟಿಕರಣ ಕುರಿತು ಸಭೆ; ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಭೇಟಿ

- Advertisement -G L Acharya panikkar
- Advertisement -

ಎರುಂಬು: ಮೈರ-ಎರುಂಬು-ತಾಳಿಪಡ್ಪು ರಸ್ತೆ ಅಗಲೀಕರಣ ಮತ್ತು ಕಾಂಕ್ರೀಟಿಕರಣ ಬಗೆಗೆ ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನದಲ್ಲಿ ಇಂದು ನಡೆದ ಸಭೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಂಜೀವ ಮಠಂದೂರು ಭೇಟಿಯು ಎರುಂಬು, ಮುಳಿಯ, ಪ್ರದೇಶದ ಜನರಿಗೆ ತುಂಬಾ ಸಮಾಧಾನ ತಂದುಕೊಟ್ಟಿತು. ಹಲವು ವರ್ಷಗಳಿಂದ ಆಮೆಗತಿಯ ರಸ್ತೆಯ ದುರಸ್ತಿಯ ಬೆಳವಣಿಗೆ ಜನರ ಆಸಮಾಧಾನಕ್ಕೆ ಕಾರಣವಾಗಿತ್ತು.

ಇದಕ್ಕೆ ಸ್ಪಂದಿಸಿದ ಶಾಸಕರು ದಿಢೀರ್ ಭೇಟಿಯಿತ್ತು ಅಳಿಕೆ ಗ್ರಾಮಕ್ಕೆ ಒದಗಿಸಿದ ಅನುದಾನಗಳ ಬಗ್ಗೆ ಮತ್ತು ಸರಕಾರದ ವತಿಯಿಂದ ನೀಡಲಾಗುವ ರಸ್ತೆ, ಸೇತುವೆ, ಕಾಲುಸೇತುವೆ, ಜೀರ್ಣೋದ್ದಾರ ಕಾರ್ಯಗಳ ಉನ್ನತಿಯ ಬಗ್ಗೆ ಸ್ವತಃ ವಿವರಿಸಿದರು. ಸ್ಥಳೀಯರು ನೀಡಿದ ಸದ್ರಿ ರಸ್ತೆಯ ಕಾಂಕ್ರೀಟಿಕರಣದ ಬಗ್ಗೆ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ, ಸುಮಾರು 50 ಲಕ್ಷಗಳ ಅನುದಾನ ದೊರಕಿಸುವ ಪ್ರಯತ್ನಗಳ ಬಗ್ಗೆ ಆಶ್ವಾಸನೆ ನೀಡಿದರು.

ಆ ಬಗ್ಗೆ ಅಗತ್ಯವಾಗಿ ಮತ್ತು ಈ ಆರ್ಥಿಕ ವರ್ಷದೊಳಗೆ ಬೇಡಿಕೆ ಈಡೇರಿಸುವ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಅಳಿಕೆ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕಾನ ಈಶ್ವರ ಭಟ್, ಈ ರಸ್ತೆಯ ದುರಸ್ತಿಯ ಹಿಂದಿನ ಕ್ರಮಾಗತ ಬೆಳವಣಿಗೆ ಬಗ್ಗೆ ಉಲ್ಲೇಖಿಸಿ, ಕ್ಷಿಪ್ರವಾಗಿ ನಡೆಸುವ ಪ್ರಯತ್ನ ಅಗತ್ಯವಿದೆ ಎಂದರು.

ಸಾಮಾಜಿಕ ಸಂಘಟಕ ಶ್ರೀ ಮೋಹನದಾಸ್ ರೈ ಯವರು ಪ್ರಸ್ತಾವನೆಯ ಮಾತುಗಳಲ್ಲಿ 25-30ವರ್ಷಗಳ ರಾಜಮಾರ್ಗದ ನಾದುರಸ್ತಿ ನಮಗೆಲ್ಲ ನಾಚಿಕೆ ತರುವಂಥಹುದು, ನಾಲ್ಕು ಊರುಗಳಿಂದ ಸಂಚರಿಸುವ ವಿದ್ಯಾರ್ಥಿ, ವೃದ್ದರು, ಊರ ಅಸಂಖ್ಯಾತ ನಾಗರಿಕರು ಕಷ್ಟ ಪಡುತ್ತಿದ್ದಾರೆ.4-5 ದೇವಾಲಯಗಳಿಗೆ ಸಂಪರ್ಕ ನೀಡುವ ರಸ್ತೆಯ ಕಾಂಕ್ರೀಟಿಕರಣಗೊಳಿಸದಿದ್ದರೆ ಬಹಳಷ್ಟು ಕಾರ್ಯಕರ್ತರ ನೋವಿಗೆ ಕಾರಣವಾಗುತ್ತದೆ ಎಂದು ಮನವಿ ಸಲ್ಲಿಸಲಾಯಿತು.

ಹಿರಿಯ ಕಾರ್ಯಕರ್ತರಾದ ಮಿತ್ತಳಿಕೆ ಶ್ರೀ ಚಂದ್ರನಾಥ ಆಳ್ವ, ರೂಪೇಶ್ ರೈ ಅಳಿಕೆ, ಪಂಚಾಯತ್ ಸದಸ್ಯರಾದ ಸುಕುಮಾರ ಮುಳಿಯ, ಶ್ರೀ ದಿವ್ಯಜ್ಯೋತಿ ಮಿತ್ರವೃಂದದ ಅಧ್ಯಕ್ಷ ಜಯಪ್ರಕಾಶ್, ಶ್ರೀ ವಿಷ್ಣುಮಂಗಲ ಸೇವಾಸಮಿತಿ ಅಧ್ಯಕ್ಷ ವಸಂತ ನೆಲ್ಲಿಮಾರು, ಹರಿಪ್ರಸಾದ್ ಯಾದವ್, ಶ್ರೀ ರಾಮಭಟ್ ಎರುಂಬು ಉಪಸ್ಥಿತರಿದ್ದರು.

ಅಳಿಕೆ, ಎರುಂಬು, ಮುಳಿಯದ ಹತ್ತು ಸಮಸ್ತರು ಸಾಕ್ಷಿಯಾದರು. ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!