Friday, March 29, 2024
spot_imgspot_img
spot_imgspot_img

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಲಿಂಗ ದಂಪತಿಗಳು..!

- Advertisement -G L Acharya panikkar
- Advertisement -
vtv vitla

2019ರಲ್ಲಿ ಮದುವೆಯಾಗಿದ್ದ ಭಾರತೀಯ ಅಮೇರಿಕನ್ ಸಲಿಂಗ ದಂಪತಿಗಳು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಮಿತ್ ಶಾ ಅವರು ನ್ಯೂಜೆರ್ಸಿಯ ಗುಜರಾತಿ ಅಮೇರಿಕನ್ ಆಗಿದ್ದು, ಅವರು ಹೊಸ ದೆಹಲಿಯ ತೆಲುಗು ವ್ಯಕ್ತಿ ಆದಿತ್ಯ ಮಾದಿರಾಜು ಅವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಈ ಸಲಿಂಗ ವಿವಾಹ ಭಾರೀ ವೈರಲ್ ಆಗಿದ್ದು, ಎಲ್ಲೆಡೆ ಸುದ್ದಿಗೆ ಗ್ರಾಸವಾಗಿತ್ತು.

ಸಲಿಂಗ ವಿವಾಹವಾಗಿರುವ ಅವರು ಮಕ್ಕ ಳನ್ನು ಪಡೆಯುವ ಬಗ್ಗೆ ಚಿಂತನೆಯಲ್ಲಿದ್ದಾಗ ಐವಿಎಫ್ ಮೂಲಕ ಸಾಧ್ಯವಿದೆ ಎಂದು ಅರಿತುಕೊಂಡರು. ದಾನಿಗಳ ಅಂಡಾಶಯದಿಂದ ಮಗುವನ್ನು ಹೊಂದಲು ಅವರು ಸಿದ್ಧರಾಗುತ್ತಿದ್ದಾರೆ. ನಾವಿಬ್ಬರು ಎಲ್ಲರಂತೆಯೇ ಮಕ್ಕಳನ್ನು ಬೆಳಸಲಿದ್ದೇವೆ ಎಂದು ಆದಿತ್ಯ ಹೇಳಿಕೊಂಡಿದ್ದಾರೆ.

ಅಮಿತ್‌ ಶಾ ಮತ್ತು ಆದಿತ್ಯ ಮದಿರಾಜು ಎಂಬ ಇಬ್ಬರು ಸಲಿಂಗ ದಂಪತಿ ಮದುವೆಯಾಗಿರುವ ವಿಚಾರ ಭಾರೀ ವೈರಲ್ ಆಗಿತ್ತು. ಈಗ ಇವರಿಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದನ್ನು ಪೀಪಲ್‌ ಎಂಬ ನಿಯತಕಾಲಿಕ ಫೋಟೋ ಸಹಿತ ವರದಿ ಪ್ರಕಟಿಸಿದೆ.

2016ರಲ್ಲಿ ಸ್ನೇಹಿತ ಮೂಲಕ ಪರಸ್ಪರ ಭೇಟಿಯಾಗಿದ್ದ ಅಮಿತ್-ಆದಿತ್ಯ 2019ರಲ್ಲಿ ಅಮೆರಿಕಾದ ನ್ಯೂಜರ್ಸಿಯಲ್ಲಿ ಹಿಂದೂ ಸಂಪ್ರದಾಯದಂತೆಯೇ ಇವರ ವಿವಾಹ ನಡೆದಿತ್ತು.

ಇನ್ನು ಮಗುವನ್ನು ಪಡೆಯುವ ಕುರಿತು ಮಾತನಾಡಿದ ಆದಿತ್ಯ, ನಾವು ಸಲಿಂಗ ಪೋಷಕರಾಗುವುದಿಲ್ಲ, ಸಾಮಾನ್ಯ ಪೋಷಕರಾಗುತ್ತೇವೆ. ಸಾಮಾನ್ಯ ಮಕ್ಕಳಂತೆಯೇ ನಾವೂ ನಮ್ಮ ಮಗುವನ್ನು ಬೆಳೆಸಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

- Advertisement -

Related news

error: Content is protected !!