Thursday, May 2, 2024
spot_imgspot_img
spot_imgspot_img

ಮೊಬೈಲ್‌ಗೆ ಲಿಂಕ್ ಕಳುಹಿಸಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಾವಿರಾರು ರೂ. ವಂಚನೆ

- Advertisement -G L Acharya panikkar
- Advertisement -

ಉಡುಪಿ : ಆರೋಗ್ಯ ಇಲಾಖೆಯ ಸಿಬ್ಬಂದಿಯೊಬ್ಬರಿಗೆ ಮೊಬೈಲ್‌ಗೆ ಲಿಂಕ್ ಕಳುಹಿಸಿ ವಿವರಗಳನ್ನು ಪಡೆದು ಆನ್‌ಲೈನ್‌ ಮೂಲಕ 99,999 ರೂ. ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಹರೀಶ್‌ ಎಸ್‌. ಅವರು ಉಡುಪಿಯ ಎಸ್‌.ಬಿ.ಐ. ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರು ಅವರ ಇಲಾಖೆಯ ಕೆ.ಜಿ.ಐ.ಡಿ. ಹಣ ಬ್ಯಾಂಕ್‌ಗೆ ಜಮೆಗೊಂಡಿರುವುದನ್ನು ಗಮನಿಸಿದ ಅಪರಿಚಿತ ವ್ಯಕ್ತಿಗಳು ಫೆ. 11ರಂದು ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿ ಬ್ಯಾಂಕ್‌ ವಿವರ ಪಡೆದು ಖಾತೆಯಿಂದ 1,499 ರೂ., 98,500 ರೂ. ಸಹಿತ ಒಟ್ಟು 99,999 ರೂ.ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಈ ಮೂಲಕ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!