Saturday, August 29, 2026
spot_imgspot_img
spot_imgspot_img

ಮೊಬೈಲ್ ಆಪ್  ಮೂಲಕ ಸಾಲ ಪಡೆದ ಮಹಿಳೆಯೋರ್ವರಿಗೆ ನಗ್ನ ಪೊಟೋ ವೈರಲ್ ಮಾಡುವ ಬೆದರಿಕೆ

- Advertisement -
- Advertisement -

ಮಂಗಳೂರು:  ಮೊಬೈಲ್ ಆಪ್  ಮೂಲಕ ಸಾಲ ಪಡೆದ ಮಹಿಳೆಯೋರ್ವರಿಗೆ ಸಾಲವನ್ನು ಮರುಪಾವತಿಸಿದ ಬಳಿಕವೂ ಹೆಚ್ಚಿನ ಹಣ ಪಾವತಿಸಲು ಒತ್ತಾಯಿಸಿ ನಗ್ನ ಪೊಟೋ ಹರಿಬಿಡುವ ಬೆದರಿಕೆಯನ್ನು ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಎಪ್ರಿಲ್ 15 ರಂದು ಮಹಿಳೆ ಗೂಗಲ್ ಪ್ಲೇ ಸ್ಟೋರ್ ನಿಂದ ‘ಕ್ವಿಕ್ ಮನಿ ‘ಎಂಬ ಆಪ್ ಅನ್ನು  ಡೌನ್ ಲೋಡ್ ಮಾಡಿ ಲೋನ್ ಆಪ್ ನಲ್ಲಿ ರೂ. 10000/- ಸಾಲ ಅಪ್ಲೈ ಮಾಡಿದ್ದ ಕೂಡಲೇ ಅವರ ಖಾತೆಗೆ ರೂ 7500/- ಕ್ರೆಡಿಟ್ ಆಗಿ ಮಹಿಳೆ ಸ್ವಲ್ಪ ದಿನಗಳ ನಂತರ 10000/- ವನ್ನು ಮರು ಪಾವತಿ ಮಾಡಿದ್ದರು.
ಹಲವಾರು ಫೋನ್ ನಂಬ್ರದಿಂದ ಮಹಿಳೆಗೆ ಕಡ್ಡಾಯವಾಗಿ ಪುನಃ ಲೋನನ್ನು ಪಡೆಯಬೇಕೆಂದು ಒತ್ತಾಯಿಸಿ ಅವರ ಖಾತೆಗೆ ರೂ 14 ಸಾವಿರ ವನ್ನು ಕ್ರೆಡಿಟ್ ಮಾಡಿದ್ದಾರೆ. ಈ ಹಣವನ್ನು ಮಹಿಳೆ ಮರು ಪಾವತಿ ಮಾಡಿದ್ದರು .

ಎಲ್ಲಾ ಹಣವನ್ನು ಪಾವತಿಸಿದ ಬಳಿಕ ವಿವಿಧ ಮೊಬೈಲ್ ನಂಬ್ರಗಳಿಂದ ಮಹಿಳೆಗೆ ಕರೆ ಮಾಡಿ ಹೆಚ್ಚಿನ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಿ ರೂ.51 ಸಾವಿರವ ನ್ನು ತಮ್ಮ ಖಾತೆಗೆ ವರ್ಗಾಯಿಸಿ  ನಂತರದ ದಿನಗಳಲ್ಲಿ ಮಹಿಳೆಗೆ ಬೇರೆ ಬೇರೆ ನಂಬ್ರಗಳಿಂದ ಕರೆ ಮಾಡಿ ಹಣವನ್ನು ಹಿಂತಿರುಗಿಸುವಂತೆ ಬೆದರಿಕೆ ಹಾಕಿದ್ದರು.

ಮಹಿಳೆಯ ಫೋಟೋವನ್ನು ಹುಡುಗನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್ ಮಾಡಿ ಮಹಿಳೆಗೆ ಕಳುಹಿಸಿ ಇತರರಿಗೆ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಮಹಿಳೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!