Monday, May 6, 2024
spot_imgspot_img
spot_imgspot_img

ಯಕ್ಷಾಭಿಮಾನಿಗಳಿಂದ ಮೆಚ್ಚುಗೆ ಪಡೆದ ಯಕ್ಷಭಾರತ ಸೇವಾ ಪ್ರತಿಷ್ಠಾನ ರಿ. ವಿಟ್ಲ ವಿದ್ಯಾರ್ಥಿಗಳಿಂದ ನಾಳೆ ಪೆರ್ಲದಲ್ಲಿ ಯಕ್ಷಗಾನ ಬಯಲಾಟ

- Advertisement -G L Acharya panikkar
- Advertisement -
vtv vitla

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯಕ್ಷಗಾನ ನಾಟ್ಯಗುರು ಸಬ್ಬಣಕೋಡಿ ರಾಮ್ ಭಟ್ ಇವರಿಂದ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು

ಯಕ್ಷಭಾರತ ಸೇವಾ ಪ್ರತಿಷ್ಠಾನ ರಿ. ವಿಟ್ಲ ಇದರ ವಿದ್ಯಾರ್ಥಿಗಳು ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಟ್ಯಗುರು ಸಬ್ಬಣಕೋಡಿ ರಾಮ್ ಭಟ್ ಇವರಿಂದ ಪಾರಂಪರಿಕ ಯಕ್ಷಗಾನದ ನಾಟ್ಯ ತರಬೇತಿಯನ್ನು ಪಡೆಯುತ್ತಿದ್ದು ಪಡೆದು ಉತ್ತಮ ಕಲಾವಿದರಾಗಿ ಹೊರಹೊಮ್ಮುತ್ತಿದ್ದಾರೆ. ಶ್ರೀ ಭಗವತೀ ದೇವಸ್ಥಾನದ ಬಳಿ ಯಕ್ಷಗಾನ ನಾಟ್ಯ ತರಗತಿಯನ್ನು ಪ್ರಾರಂಭಿಸಿದ ಇವರು ಇದೀಗ ಹಲವು ಶಿಷ್ಯರನ್ನೊಳಗೊಂಡ ಶ್ರೇಷ್ಠ ಯಕ್ಷಗಾನದ ಗುರುವಾಗಿ, ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯನ್ನು ನೀಡುತ್ತಾ ಬಂದಿರುತ್ತಾರೆ.

ಯಕ್ಷಗಾನ, ನಾಟ್ಯವೈಭವ, ಹೀಗೆ ವಿವಿಧ ಕಾರ್ಯಕ್ರಮಗಳನ್ನು ಹಲವಾರು ಕಡೆಗಳಲ್ಲಿ ಪ್ರದರ್ಶಿಸಿ ನೋಡುಗರನ್ನು ಬೆರಗುಗೊಳಿಸಿ ಯಕ್ಷಾಭಿಮಾನಿಗಳಿಂದ ಭೇಷ್ ಎನಿಸಿಕೊಂಡಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷರಾದ ಲ.ಸಂಜೀವ ಪೂಜಾರಿಯವರು ವಿದ್ಯಾರ್ಥಿಗಳಿಗೆ ಸರ್ವರೀತಿಯ ಪ್ರೋತ್ಸಾಹ ಕೊಡುತ್ತ ಬಂದಿದ್ದಾರೆ, ಹಾಗೂ ನಿಮ್ಮೆಲ್ಲರ ಪ್ರೋತ್ಸಾಹ ಕೋರಿದ್ದಾರೆ.

ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ) ಪೆರ್ಲ ಇದರ 18 ನೇ ವರ್ಷದ ವಾರ್ಷಿಕೋತ್ಸವ, ರಂಗ ವೇದಿಕೆ, ಉದ್ಘಾಟನಾ, ಪ್ರಶಸ್ತಿ ಪ್ರಧಾನ ಸಮಾರಂಭ ನಾಟ್ಯಗುರು ಸಬ್ಬಣಕೋಡಿ ರಾಮ್ ಭಟ್ ಅವರ ಷಷ್ಟ್ಯಬ್ದ ಕಾರ್ಯಕ್ರಮದ ಅಂಗವಾಗಿ ಯಕ್ಷಭಾರತ ಸೇವಾ ಪ್ರತಿಷ್ಠಾನ.ರಿ ವಿಟ್ಲ ಇದರ ವಿದ್ಯಾರ್ಥಿಗಳಿಂದ “ಶ್ರೀ ರಾಮಾನುಗ್ರಹ” ಮಕ್ಕಳ ಯಕ್ಷಗಾನ ಬಯಲಾಟ 26.02.2023 ನೇ ಆದಿತ್ಯವಾರ ಪೆರ್ಲದಲ್ಲಿ ಪ್ರದರ್ಶನಗೊಳ್ಳಲಿದೆ.

- Advertisement -

Related news

error: Content is protected !!