Friday, April 19, 2024
spot_imgspot_img
spot_imgspot_img

ಯುವಕರನ್ನು ಐಸಿಸ್ ಗೆ ಸೆಳೆಯುತ್ತಿದ್ದಾತನ ಬಂಧನ

- Advertisement -G L Acharya panikkar
- Advertisement -

ಹೈದರಾಬಾದ್: ಕುಖ್ಯಾತ ಉಗ್ರ ಸಂಘಟನೆ ಐಸಿಸ್ ಪರ ಪ್ರಚಾರ ಮಾಡಿ ಯುವಕರನ್ನು ಸಂಘಟನೆಗೆ ಸೆಳೆಯುತ್ತಿದ್ದ ವ್ಯಕ್ತಿಯನ್ನು ಹೈದರಾಬಾದ್ ಸಿಸಿಎಸ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

vtv vitla
vtv vitla

ಬಂಧಿತ ಫಲಕ್‌ನುಮಾ ನಿವಾಸಿಯಾಗಿದ್ದು,, ಸಾಮಾಜಿಕ ತಾಣಗಳನ್ನು ಬಳಸಿಕೊಂಡು ಈತ ಐಸಿಸ್ ಪರ ಪ್ರಚಾರ ಮಾಡುತ್ತಿದ್ದ. ಸ್ನೇಹಿತರಿಗೆ, ಸಂಬಂಧಿಕರಿಗೆ ಜಿಹಾದ್ ಕಡೆ ಸೆಳೆಯಲ್ಪಡುವಂತಹ ವೀಡಿಯೋಗಳನ್ನೂ ರವಾನಿಸುತ್ತಿದ್ದ. ಇದಕ್ಕಾಗಿ ವಿಶೇಷ ಅಪ್ಲಿಕೇಶನ್ ಕೂಡಾ ಸಿದ್ದಪಡಿಸಿಕೊಂಡಿದ್ದ. ಅಲ್ಲದೆ, ಐಸಿಸ್ ಪರ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದವರನ್ನು ಸಂಪರ್ಕಿಸಿ ಮಾತುಕತೆ ನಡೆಸುತ್ತಿದ್ದ ಎನ್ನಲಾಗಿದೆ.

ಈತ ಈ ಹಿಂದೆಯೂ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಈತನ ಪತ್ತೆಗೆ ಕಾಯುತ್ತಿದ್ದರು. ಆನಂತರ ಐಪಿ ವಿಳಾಸದ ಆಧಾರದ ಮೇಲೆ ಆತ ಪತ್ತೆಯಾಗಿದ್ದು, ಬಂಧನಕ್ಕೊಳಪಡಿಸಿ ರಿಮಾಂಡ್ ಹೋಮ್ ಗೆ ಕಳುಹಿಸಲಾಗಿದೆ.

ಐಸಿಸ್ ಭಯೋತ್ಪಾದಕರೊಂದಿಗೆ ಈತ ನಿರಂತರವಾಗಿ ಸಂಪರ್ಕದಲ್ಲಿದ್ದ. ಅಲ್ಲದೆ, ಆ ಸಂಘಟನೆಯಿಂದ ಹವಾಲಾ ಮೂಲಕ ಹಣಕಾಸು ವ್ಯವಹಾರವನ್ನೂ ನಡೆಸುತ್ತಿದ್ದ ಎನ್ನಲಾಗಿದೆ.

- Advertisement -

Related news

error: Content is protected !!