Monday, April 29, 2024
spot_imgspot_img
spot_imgspot_img

ಯೂಟ್ಯೂಬ್ ನೋಡಿಕೊಂಡು ಮಗುವಿಗೆ ಜನ್ಮವಿತ್ತ 17ರ ಬಾಲಕಿ..! ಯುವಕನ ಬಂಧನ

- Advertisement -G L Acharya panikkar
- Advertisement -

ಮಲಪ್ಪುರಂ : 17 ವರ್ಷದ ಯುವತಿಯೊಬ್ಬಳು ನೆರೆಮನೆಯ ಯುವಕನ ಜೊತೆಗಿನ ಸಂಬ0ಧದಿ0ದ ಗರ್ಭವತಿಯಾಗಿದ್ದಲ್ಲದೆ, ಅದನ್ನು ಮುಚ್ಚಿಟ್ಟು ತನ್ನ ಮನೆಯ ಕೋಣೆಯೊಳಗಿದ್ದುಕೊಂಡೇ ಯೂಟ್ಯೂಬ್ ನೋಡಿಕೊಂಡು ಮಗುವಿಗೆ ಜನ್ಮ ನೀಡಿದ ಘಟನೆ ಮಲಪ್ಪುರಂ ಜಿಲ್ಲೆಯ ಕೋಟಕ್ಕಲ್ ಎಂಬಲ್ಲಿ ನಡೆದಿದೆ.

ಯುವತಿಯು ಕೋಣೆಯೊಳಗಿದ್ದುಕೊಂಡೇ ಯೂಟ್ಯೂಬ್ ನೋಡಿಕೊಂಡು ಹೆರಿಗೆ ಮಾಡಿಕೊಂಡಿದ್ದು, ಹೆರಿಗೆಯಾದ ಬಳಿಕ ಮೂರು ದಿನಗಳ ಕಾಲ ಬಾಗಿಲು ಹಾಕ್ಕೊಂಡು ಕೋಣೆಯ ಒಳಗೇ ಇದ್ದಳು. ಮಗು ಅಳುತ್ತಿರುವುದು ತಿಳಿದ ತಾಯಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಚೈಲ್ಡ್ ವೇಲ್ಫೇರ್ ಸೆಂಟರ್‌ಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣದಾಖಲಿಸಿ 21 ವರ್ಷದ ಯುವಕನನ್ನು ಬಂಧಿಸಿದ್ದಾರೆ.

ಚೈಲ್ಡ್ ಲೈನ್ ಸಿಬ್ಬಂದಿ, ಮನೆಮಂದಿ ಮಗಳು ಗರ್ಭಿಣಿಯಾಗಿದ್ದನ್ನು ಮನೆಯವರು ತಿಳಿಯದೇ ಇರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. 50ವರ್ಷದ ತಾಯಿಗೆ ದೃಷ್ಟಿದೋಷವಿದ್ದರಿಂದ ಮಗಳು ಗರ್ಭಿಣಿಯಾಗಿದ್ದು ಆಕೆಗೂ ತಿಳಿದಿರಲಿಲ್ಲ ಎನ್ನಲಾಗಿದೆ. ಮಗಳು ಹೊಟ್ಟೆ ನೋವೆಂದು ತಾಯಿ ಜೊತೆಗೆ ಎರಡು ಬಾರಿ ಆಸ್ಪತ್ರೆಗೆ ತೆರಳಿದ್ದರು. ವೈದ್ಯರು ಮಗಳು ಗರ್ಭಿಣಿಯಾಗಿದ್ದ ವಿಚಾರವನ್ನು ತಾಯಿಗೆ ತಿಳಿಸಿರಲಿಲ್ಲ ಎಂದು ತಿಳಿದು ಬಂದಿದೆ. ತಂದೆ ಸೆಕ್ಯುರಿಟಿ ಗಾರ್ಡ್ ಆಗಿದ್ದು, ದಿನವೂ ರಾತ್ರಿ ವೇಳೆ ಕೆಲಸಕ್ಕೆ ಹೋಗುತ್ತಿದ್ದು, ಹಗಲಲ್ಲಿ ಮಲಗುತ್ತಿದ್ದರು. ಮಗಳು ಆನ್ ಲೈನ್ ಕ್ಲಾಸ್ ಎಂದು ಹೇಳಿ ಸದಾ ಕೋಣೆಯೊಳಗೇ ಇರುತ್ತಿದ್ದಳು. ಇದೇ ರೀತಿ ತಾನು ಗರ್ಭಿಣಿಯಾಗಿದ್ದನ್ನು ಮುಚ್ಚಿಟ್ಟಿದ್ದಳು ಎಂದಿದ್ದಾರೆ.

ಪೊಲೀಸರು ಹೇಳುವ ಪ್ರಕಾರ, ಇವರಿಬ್ಬರ ಸಂಬ0ಧ ಎರಡೂ ಮನೆಯವರಿಗೂ ಗೊತ್ತಿದ್ದು, ಯುವತಿಗೆ 18 ವರ್ಷ ಆದ ಕೂಡಲೇ ಮದುವೆ ಮಾಡಿಕೊಡುವ ತಯಾರಿ ನಡೆಸಿದ್ದರು. ಹುಡುಗಿ ಮನೆಯ ಕೋಣೆಯ ಒಳಗಡೆಯೇ ಹೆಚ್ಚು ಸಮಯ ಇರುತ್ತಿದ್ದಳು. ಪರಿಸರದ ನಿವಾಸಿಗಳು ಕೇಳಿದರೆ, ಆಕೆಗೆ ಆನ್ ಲೈನ್ ಕ್ಲಾಸ್ ಎಂದು ಹೇಳುತ್ತಿದ್ದರು. ಇದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎಂದರು.

- Advertisement -

Related news

error: Content is protected !!