Sunday, June 7, 2026
spot_imgspot_img
spot_imgspot_img

ವಿಟ್ಲ: ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದ ರಿಕ್ಷಾ; ಪ್ರಾಣಾಪಾಯದಿಂದ ಪಾರಾದ ಸ್ಕೂಟರ್ ಸವಾರ

- Advertisement -
- Advertisement -

ವಿಟ್ಲ: ದ್ವಿಚಕ್ರ ವಾಹನವೊಂದಕ್ಕೆ ರಿಕ್ಷಾ ಢಿಕ್ಕಿಯಾದ ಘಟನೆ ಮಾಣಿಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಸ್ಕೂಟರ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಪುತ್ತೂರು ಕಡೆಗೆ ಅತಿ ವೇಗವಾಗಿ ಚಲಾಯಿಸುತ್ತಿದ್ದ ರಿಕ್ಷಾ ಬಿ.ಸಿ. ರೋಡು ಕಡೆಗೆ ಬರುತ್ತಿದ್ದ ಸ್ಕೂಟರ್ ಸವಾರನಿಗೆ ಢಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ರಿಕ್ಷಾ ಅಲ್ಲೇ ಹತ್ತಿರದ ಹೂ ಮಾರಾಟದ ಅಂಗಡಿ ಬಳಿ ಬಂದು ನಿಯಂತ್ರಣ ಕಳೆದು ಬದಿಗೆ ವಾಲಿ ನಿಂತಿದೆ. ಸ್ಕೂಟರ್ ರಸ್ತೆ ಮಧ್ಯೆ ಮಗುಚಿ ಬಿದ್ದಿದೆ. ಸ್ಕೂಟರ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಮಾಣಿ ಜಂಕ್ಷನ್ ನಲ್ಲಿ ಪ್ಲಾಸ್ಟಿಕ್ ನಿರ್ಮಿತ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು. ಆದರೆ ಲಾಕ್ ಡೌನ್ ಅವಧಿಯಲ್ಲಿ ರಾತ್ರಿ ವೇಳೆ ಘನಗಾತ್ರದ ವಾಹನಗಳು ಇದರ ಮೇಲೆಯೇ ವಾಹನ ಹರಿಸಿ ಬ್ಯಾರಿಕೇಡ್ ಗಳು ಪುಡಿಪುಡಿಯಾಗಿವೆ.

- Advertisement -

Related news

error: Content is protected !!