Monday, July 7, 2025
spot_imgspot_img
spot_imgspot_img

ಯೋಗ ಕಲಿಕೆಗಾಗಿ ಡಿಪ್ಲೊಮಾ ಕೋರ್ಸ್ ಘೋಷಿಸಿದ ಅರವಿಂದ್ ಕೇಜ್ರಿವಾಲ್

- Advertisement -
- Advertisement -

ನವದೆಹಲಿ: ಇಂದು ದೇಶದಾದ್ಯಂತ ಯೋಗ ದಿನಾಚರಣೆಯ ಸಂಭ್ರಮ. ಈ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್. ದೆಹಲಿಯಾದ್ಯಂತ ಯೋಗವನ್ನು ದೊಡ್ಡಮಟ್ಟದಲ್ಲಿ ಪ್ರಚುಪಡಿಸುವುದಾಗಿ ಹೇಳಿದ್ದಾರೆ.

ಅಲ್ಲದೇ ಧ್ಯಾನ ಮತ್ತು ಯೋಗ ವಿಜ್ಞಾನ ಹೆಸರಿನಲ್ಲಿ ಅರವಿಂದ್ ಕೇಜ್ರಿವಾಲ್ ಒಂದು ವರ್ಷದ ಡಿಪ್ಲೊಮಾ ಕೋರ್ಸ್​ನ್ನು ಘೋಷಿಸಿದ್ದಾರೆ. ಈಗಾಗಲೇ ಇದಕ್ಕೆ 450 ಅಭ್ಯರ್ಥಿಗಳು ಇದಕ್ಕೆ ನೋಂದಣಿ ಮಾಡಿಕೊಂಡಿದ್ದು 450 ತರಬೇತಿದಾರರು ದೆಹಲಿಯ ವಿವಿಧ ಭಾಗಗಳಲ್ಲಿ ಉಚಿತ ಯೋಗಾಭ್ಯಾಸ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು ದೆಹಲಿಯಲ್ಲಿ ಯೋಗ ಕೇಂದ್ರವನ್ನೂ ಉದ್ಘಾಟಿಸಿರಯವ ಅವರು ಯೋಗ ಮತ್ತು ಧ್ಯಾನದ ಅರಿವನ್ನು ಜನರ ಮನೆಬಾಗಿಲಿಗೆ ತಲುಪಿಸಲಾಗುವುದು ಎಂದಿದ್ದಾರೆ. ನೀವು ಗುಂಪಾಗಿ ಯೋಗ ಕಲಿಯಲು ಮುಂದಾದರೆ ದೆಹಲಿ ಸರ್ಕಾರ ಉಚಿತ ಯೋಗ ತರಬೇತುದಾರರನ್ನ ನೀಡಲಿದೆ ಎಂದು ಹೇಳಿಕೆ ನೀಡಿದ್ದಾರೆ.

- Advertisement -

Related news

error: Content is protected !!