Sunday, May 5, 2024
spot_imgspot_img
spot_imgspot_img

‘ರಾಜಪಥ ಕರ್ತವ್ಯಪಥವಾಗುವುದರ ಮೂಲಕ ಹೊಸ ಚೈತನ್ಯ ಸೃಷ್ಟಿ’-ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ರಾಜಪಥದ ರಚನೆ ಗುಲಾಮಗಿರಿಯ ಸಂಕೇತವಾಗಿತ್ತು. ಆದರೆ ಇಂದು ಅದು ಕರ್ತವ್ಯಪಥವಾಗಿ ಬದಲಾಗುವುದರೊಂದಿಗೆ ಅದರ ವಾಸ್ತುಶಿಲ್ಪ ಕೂಡಾ ಬದಲಾಗಿದೆ. ಆ ಮೂಲಕ ಹೊಸ ಚೈತನ್ಯ ಸೃಷ್ಟಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಬಹು ನಿರೀಕ್ಷಿತ, ಪರಿಷ್ಕೃತ ‘ಕರ್ತವ್ಯ ಪಥ’ವನ್ನು ಉದ್ಘಾಟಿ ಗುರುವಾರ ಮಾತನಾಡಿದ ಅವರು, ಬ್ರಿಟಿಷರ ಕಾಲದ ಹಲವು ಕಾನೂನುಗಳು ದೇಶದಲ್ಲಿ ಇಂದು ಬದಲಾಗಿವೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ದೇಶ ಹೊಸ ಬದಲಾವಣೆ ಕಂಡಿದೆ. ಇದೀಗ ರಾಜಪಥವು ಕರ್ತವ್ಯ ಮಾರ್ಗವಾಗಿ ಬದಲಾಗಿದ್ದು, ಗುಲಾಮಗಿರಿ ಮನಸ್ಥಿತಿಯ ಅಂತ್ಯವಾಗಿದೆ ಎಂದರು.

ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಸಂದರ್ಭದಲ್ಲಿ ಪಂಚಪ್ರಾಣ ದರ್ಶನದ ಗುರಿಯನ್ನು ಇಡಲಾಗಿದೆ. ಇದರಲ್ಲಿ ಅಭಿವೃದ್ದಿಯ ಸಂಕಲ್ಪ ದೊಡ್ಡ ಗುರಿಯಾಗಿದೆ. ಹೊಸದಾಗಿ ನಿರ್ಮಾಣಗೊಂಡ ಕರ್ತವ್ಯಪಥದಲಲ್‌ಇ ಭಾರತದ ಭವಿಷ್ಯವನ್ನು ಕಾಣಬಹುದು. ಇಲ್ಲಿರುವ ಶಕ್ತಿ ನಮ್ಮ ರಾಷ್ಟ್ರದ ಭವಿಷ್ಯಕ್ಕೆ ಹೊಸ ದೃಷ್ಟಿ ನೀಡಬಲ್ಲದು ಎಂದವರು ಬಣ್ಣಿಸಿದರು.

ಕೇವಲ ಕಾಂಕ್ರಿಟ್ ಮಾರ್ಗವಾಗಿಯಷ್ಟೇ ಕರ್ತವ್ಯಪಥ ರೂಪುಗೊಂಡಿಲ್ಲ. ಬದಲಾಗಿ ಭಾರತದ ಪ್ರಜಾಸತ್ತಾತ್ಮಕ ಮತ್ತು ಮೌಲ್ಯಗಳ ಸಿರಿವಂತಿಕೆಯ ಸಂಕೇತವಾಗಿ ತೆರೆದುಕೊಂಡಿವೆ. ನೇತಾಜಿ ಅವರ ಪ್ರತಿಮೆ, ರಾಷ್ಟ್ರೀಯ ಯುದ್ಧ ಸ್ಮಾರಕವು ದೇಶಕ್ಕಾಗಿ ಕೆಲಸ ಮಾಡಲು ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡುವಂತಿದೆ ಎಂದರು.

- Advertisement -

Related news

error: Content is protected !!