Thursday, April 25, 2024
spot_imgspot_img
spot_imgspot_img

ರಾಜ್ಯದಲ್ಲಿ ನಾಳೆಯಿಂದ ಅನ್ ಲಾಕ್ 4.0 ಜಾರಿ

- Advertisement -G L Acharya panikkar
- Advertisement -

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 19 ರ ನಂತರ ರಾಜ್ಯ ಸರಕಾರ ಸಂಪೂರ್ಣ ಅನ್ ‌ಲಾಕ್ ತೆರವು.

ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಇಂದು ಮಹತ್ವದ ಸಭೆ ನಡೆಸಿದ್ದು, ಈ ಸಭೆಯಲ್ಲಿ ಅನ್ ಲಾಕ್ 4.0 ಜಾರಿ ಕುರಿತು ಚರ್ಚೆ ನಡೆದಿದೆ, ಸಿಎಂ ಯಡಿಯೂರಪ್ಪ ಇಂದು ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ರಾಜ್ಯಾದ್ಯಂತ ಜುಲೈ 26ರ ನಂತರ ಡಿಗ್ರಿ ಕಾಲೇಜ್ ಓಪನ್‌ಗೆ ಗ್ರೀನ್ ಸಿಗ್ನಲ್, ಚಿತ್ರಮಂದಿರಗಳಿಗೆ ನಾಳೆಯಿಂದ ಅವಕಾಶ.

ರಾಜ್ಯ ಸರ್ಕಾರವು ಈಗಾಗಲೇ ಅನ್ ಲಾಕ್ 3.0 ಜಾರಿ ಮಾಡಿದ್ದು, ಬಸ್‌ , ಮೆಟ್ರೋ, ಮಾಲ್‌, ಬಾರ್‌, ಹೋಟೆಲ್‌, ರೆಸ್ಟೋರೆಂಟ್‌, ಖಾಸಗಿ ಕಚೇರಿ, ಧಾರ್ಮಿಕ ಸ್ಥಳಗಳು ಸೇರಿದಂತೆ ಹಲವು ವಲಯಗಳಿಗೆ ಅವಕಾಶವನ್ನು ನೀಡಲಾಗಿದೆ. ಆದರೆ ಚಿತ್ರಮಂದಿರಗಳಿಗೆ ಅವಕಾಶ ದೊರಕಿಲ್ಲ. ಹೀಗಾಗಿ ಮುಂದಿನ ಅನ್‌ಲಾಕ್‌ ನಲ್ಲಿ ಚಿತ್ರಮಂದಿರಗಳು ತೆರೆಯಲು ನಾಳೆಯಿಂದ ಆವಕಾಶ.

ಇನ್ನು ರಾಜ್ಯದಲ್ಲಿ ಪ್ರಸ್ತುತ ರಾತ್ರಿ 9 ಗಂಟೆಯಿಂದ ನೈಟ್‌ ಕರ್ಪ್ಯೂ ಜಾರಿಯಲ್ಲಿದ್ದು, ಜುಲೈ 19 ರ ನಂತರ ನೈಟ್‌ ಕರ್ಪ್ಯೂ ಸಂಪೂರ್ಣ ಬ್ರೇಕ್‌. ಜುಲೈ ಅಂತ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತಂತೆ ರಾಜ್ಯ ಸರ್ಕಾರವು ತಜ್ಞರೊಂದಿಗೆ ಚರ್ಚೆ ನಡೆಸಿದೆ.

- Advertisement -

Related news

error: Content is protected !!