- Advertisement -
- Advertisement -
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ದೇಶದ ಪ್ರತಿಯೊಬ್ಬ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಈ ಯೋಜನೆ ಆರಂಭಿಸಿದ್ದು ಇದರ ಲಾಭವನ್ನು ದೇಶದ 10 ಕೋಟಿಗೂ ಹೆಚ್ಚು ರೈತರು ಈಗಾಗಲೇ ಪಡೆಯುತ್ತಿದ್ದಾರೆ. ಪಿಎಮ್ ಕಿಸಾನ್ ಯೋಜನೆ ಫಲಾನುಭವಿಗಳು ಇ- ಕೆವೈಸಿ ಪೂರ್ಣಗೊಳಿಸುವುದು ಅವಶ್ಯಕವಾಗಿದ್ದು, ಈ ಕೆಳಗೆ ನೀಡಲಾದ ಪ್ರಕ್ರಿಯೆಯ ಮುಖಾಂತರ ತಾವೇ ಸ್ವತಃ ಇ- ಕೆ.ವೈ.ಸಿ. ಯನ್ನು ಪೂರ್ಣಗೊಳಿಸಬಹುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಜಾದ್ ಜೋಶಿ (Pralhad Joshi) ಅವರು ಮಾಹಿತಿ ನೀಡಿದ್ದಾರೆ.

- ಪಿಎಮ್ ಕಿಸಾನ್ ನ ಜಾಲತಾಣಕ್ಕೆ ಭೇಟಿ ನೀಡಿ
- ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ ನೀಡಿರುವ ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿ
- ಓಟಿಪಿ ಬೇಸ್ಡ್ ಇಕೆವೈಸಿ ವಿಭಾಗದ ಅಡಿಯಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ
- ಸರ್ಚ್ ಮೇಲೆ ಕ್ಲಿಕ್ ಮಾಡಿ
- ಆಧಾರನೊಂದಿಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ಫೋನ್ ನಂಬರ್ ನಮೂದಿಸಿ ಹಾಗು ʼಗೆಟ್ ಓಟಿಪಿʼ ಮೇಲೆ ಕ್ಲಿಕ್ ಮಾಡಿ
- ಓಟಿಪಿ ಎಂಟರ್ ಮಾಡಿ
- ನಿಮ್ಮ ಇ-ಕೆವೈಸಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.

ಸೂಚನೆ: ಯಾವುದೇ ತರಹದ ಸಹಾಯಕ್ಕಾಗಿ ಅಥವಾ ಪ್ರಶ್ನೆಗಳಿದ್ದಲ್ಲಿ ಪಿಎಮ್ ಕಿಸಾನ್ ಸಹಾಯವಾಣಿಗೆ ಸಂಪರ್ಕಿಸಿ 011-24300606. ಹಾಗೂ ಆಧಾರ್ ಕಾರ್ಡ್ನ ಓಟಿಪಿ ಸಂಬಂಧಿತ ಸಹಾಯಕ್ಕಾಗಿ [email protected] ಗೆ ಸಂಪರ್ಕಿಸಿ.

- Advertisement -








