Tuesday, June 30, 2026
spot_imgspot_img
spot_imgspot_img

ಮಹಿಳೆಯನ್ನು ಕೊಂದು ಮೃತದೇಹವನ್ನು ಅಡುಗೆ ಕೋಣೆಯಲ್ಲೇ ಸುಟ್ಟ ವ್ಯಕ್ತಿ ಖಾಕಿ ವಶಕ್ಕೆ!

- Advertisement -
- Advertisement -

ಕೇರಳ: ವ್ಯಕ್ತಿಯೊಬ್ಬ ತನ್ನ ಲಿವ್ ಇನ್ ಪಾರ್ಟ್ನರನ್ನು ಕೊಲೆ ಮಾಡಿ, ಅಡುಗೆ ಮನೆಯಲ್ಲೇ ಶವವನ್ನು ಸುಟ್ಟ ಆಘಾತಕಾರಿ ಘಟನೆಯೊಂದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆ ಸಿಂಧು ಬಾಬು(45) ವರ್ಷ ಎನ್ನಲಾಗಿದೆ. ಬಂಧಿತ ಆರೋಪಿ ಬಿನೋಯ್(49)ಎಂದು ಗುರುತಿಸಲಾಗಿದೆ.

ಮೃತ ಮಹಿಳೆಯ ಕುಟುಂಬಸ್ಥರು ಸಿಂಧು ನಾಪತ್ತೆಯಾಗಿದ್ದಾಳೆ ಎಂದು ಪ್ರಕರಣ ದಾಖಲಿಸಿದ್ದರು. ಅದರಂತೆ ಪೊಲೀಸರು ಸಿಂಧು ಹುಡುಕಾಟ ಶುರು ಮಾಡಿದ ವೇಳೆ ಕಾಣೆಯಾಗಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಮೃತ ಮಹಿಳೆ ಸಿಂಧು ಬಿನೋಯ್ ನಿವಾಸದಲ್ಲಿ ತನ್ನ ಪುತ್ರ ಅಖಿಲ್ ಜೊತೆ ಬಾಡಿಗೆಗೆ ವಾಸವಿದ್ದರು ಎನ್ನಲಾಗಿದೆ. ಪತಿಯಿಂದ ದೂರಾಗಿದ್ದ ಸಿಂಧು ಬಿನೋಯ್ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಸಿಂಧು ತನ್ನ ಪತಿಯ ಮೇಲೆ ಸಹಾನುಭೂತಿ ತೋರಿದ್ದೇ ಬಿನೋಯ್ ಕೋಪಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಬಿನೋಯ್ ಸಿಂಧುಳನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಬಿನೋಯ್ ಕಳೆದ 26 ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಪ್ರಕರಣ ಭೇದಿಸಲು ಪೊಲೀಸರು ವಿಶೇಷ ತಂಡ ರಚಿಸಿದ್ದು, ಸ್ಥಳೀಯರ ನೆರವಿನಿಂದ ಬಿನೋಯ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

driving
- Advertisement -

Related news

error: Content is protected !!