Monday, May 20, 2024
spot_imgspot_img
spot_imgspot_img

ರಾಜ್ಯದ ಹಲವೆಡೆ ಅ.11ರವರೆಗೆ ಜೋರು ಮಳೆ ಸಾಧ್ಯತೆ

- Advertisement -G L Acharya panikkar
- Advertisement -

ಕರ್ನಾಟಕದ ಕರಾವಳಿ ಜಿಲ್ಲೆ ಹೊರತುಪಡಿಸಿದರೆ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಚುರುಕಾಗಿದೆ. ಮುಂದಿನ ನಾಲ್ಕು ದಿನ ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವೆಡೆ ದಿನ ಬಿಟ್ಟು ದಿನ ಅಬ್ಬರದ ಮಳೆ ಆಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಿತ್ಯ ನಿರಂತರವಾಗಿ ಹವಾಮಾನದಲ್ಲಿ ಏರಿಳಿತಗಳು ಉಂಟಾಗುತ್ತಿವೆ. ಈ ಕಾರಣದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಟ ಮುಂದುವರಿದಿದೆ. ವಿವಿಧ ಪ್ರದೇಶಗಳಲ್ಲಿ ಒಂದು ದಿನ ಜೋರು ಮಳೆ ಬಂದರೆ, ಮರು ದಿನ ವಾತಾವರಣ ಸಹಜ ಸ್ಥಿತಿಗೆ ಮರಳುತ್ತಿದೆ.

ಕರಾವಳಿ ಜಿಲ್ಲೆಗಳಲ್ಲಿ ಮಳೆ ದುರ್ಬಲಗೊಂಡಿದೆ. ಇದರ ಹೊರತಾಗಿ ಮುಂದಿನ ನಾಲ್ಕು ದಿನ (ಅಕ್ಟೋಬರ್ 11ರವರೆಗೆ) ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ದಿನಬಿಟ್ಟು ದಿನ ಧಾರಾಕಾರವಾಗಿ ಮಳೆ ಅಬ್ಬರಿಸಲಿದೆ. ಅಕ್ಟೋಬರ್ 8 ಮತ್ತು 11ರಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯಪುರ ಮತ್ತು ಯಾದಗಿರಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.

ಅದೇ ರೀತಿ ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ 10 ಮತ್ತು 11ರಂದು ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣೆಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಈ ಕಾರಣಕ್ಕೆ ಇಷ್ಟು ಜಿಲ್ಲೆಗಳಿಗೆ ಎರಡು ದಿನ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.

ಇನ್ನು ಕಳೆದ 24ಗಂಟೆಗಳಲ್ಲಿ ಗೋಕರ್ಣ, ಗುಂಡಗುರ್ತಿಯಲ್ಲಿ ತಲಾ 6ಸೆಂಟಿ ಮೀಟರ್ ಬೀದರ್, ಮುನಿರಾಬಾದ್, ರಾಯಭಾಗ್, ಹಿಡಕಲ್ ಆಣೆಕಟ್ಟು, ಕಮಲಾಪುರ, ಸೈದಾಪುರ ಪ್ರದೇಶಗಳಲ್ಲಿ ತಲಾ 5ಸೆಂ.ಮೀ. ಮಳೆ ಆಗಿದೆ. ಉಳಿದಂತೆ ಶಹಾಪುರ, ನವಲಗುಂದ, ಮಾನ್ವಿ, ಕಲಘಟಗಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಧಾರಣವಾಗಿ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

- Advertisement -

Related news

error: Content is protected !!