Saturday, June 20, 2026
spot_imgspot_img
spot_imgspot_img

ರಾಜ್ಯಾದ್ಯಂತ 15 ದಿನಗಳ ಕಾಲ ಮದ್ಯ ಸಿಗಲ್ಲ; ವ್ಯಾಪಾರಿಗಳ ಮುಷ್ಕರ

- Advertisement -
- Advertisement -

ಉಡುಪಿ: ರಾಜ್ಯಾದ್ಯಂತ ನಾಳೆಯಿಂದ ಹದಿನೈದು ದಿನಗಳ ಕಾಲ ವ್ಯಾಪಾರಿಗಳ ಮುಷ್ಕರ ನಡೆಯಲಿದೆ.

ಕೆಎಸ್ ಪಿಸಿಎಲ್ ಎಂಡಿ ತುಘಲಕ್ ದರ್ಬಾರ್‌ ನಡೆಸುತ್ತಿದ್ದಾರೆ. ಅಬಕಾರಿ ಸಚಿವರು, ಮುಖ್ಯ ಮಂತ್ರಿಗಳು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮತ್ತೆ ಖರೀದಿಯನ್ನು ವಿಭಾಗ ಮದ್ಯದಲ್ಲಿ ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಉಡುಪಿಯಲ್ಲಿ ರಾಜ್ಯ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಘೋಷಿಸಿದ್ದಾರೆ.

Kerala bar ban upheld

ಒಂದು ದಿನ ಮದ್ಯ ಖರೀದಿ ಮಾಡದಿದ್ದರೆ ರಾಜ್ಯದಲ್ಲಿ 70 ಕೋಟಿ ರೂಪಾಯಿ ನಷ್ಟವಾಗಲಿದ್ದು, ನಾಳೆ ಗುಲ್ಬರ್ಗ ವಿಭಾಗದಲ್ಲಿ ಮದ್ಯ ವ್ಯಾಪಾರಿಗಳಿಂದ ಮುಷ್ಕರ ನಡೆಯಲಿದೆ. ಹೊಸಪೇಟೆ, ಬೆಳಗಾವಿ, ಮೈಸೂರು ಮಂಗಳೂರು ವಿಭಾಗದಲ್ಲಿ ಮದ್ಯ ಸಿಗಲ್ಲ ಎಂದು ಗೋವಿಂದ ರಾಜ್ ಹೇಳಿದ್ದಾರೆ.

ನಾಳೆಯಿಂದ ಮೇ ತಿಂಗಳ 19ನೇ ತಾರೀಖಿನವರೆಗೆ ನಿರಂತರ ರಾಜ್ಯಾದ್ಯಂತ ಹೋರಾಟ ನಡೆಯಲಿದೆ ಎಂದು ಗೋವಿಂದರಾಜ್ ತಿಳಿಸಿದ್ದಾರೆ.

- Advertisement -

Related news

error: Content is protected !!