Sunday, May 5, 2024
spot_imgspot_img
spot_imgspot_img

ರಾಮಕುಂಜ: ಹುಟ್ಟೂರಿನಲ್ಲಿ ಶ್ರೀ ವಿಶ್ವೇಶ್ವರತೀರ್ಥರ ಪುತ್ಥಳಿ; ಶ್ರೀ ವಿಶ್ವೇಶ್ವರತೀರ್ಥ ಸ್ಮಾರಕ ಧ್ಯಾನಕೇಂದ್ರ ಲೋಕಾರ್ಪಣೆ

- Advertisement -G L Acharya panikkar
- Advertisement -


ರಾಮಕುಂಜ: ದ ಕ‌ ಜಿಲ್ಲೆ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ದಶಕಗಳ ಹಿಂದೆ ಕೀರ್ತಿಶೇಷ ಪದ್ಮವಿಭೂಷಣ ಪುರಸ್ಕೃತ , ಯತಿ ಶ್ರೇಷ್ಠರಾದ ಶ್ರೀ ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರಿಂದ ಸ್ಥಾಪಿಸಲ್ಪಟ್ಟು ಯಶಸ್ವಿಯಾಗಿ ಮುನ್ನಡೆಸಲ್ಪಡುತ್ತಿರುವ ಶ್ರೀರಾಮಕುಂಜೇಶ್ವರ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರ ಪುತ್ಥಳಿ ಮತ್ತು ಅವರ ಸಂಸ್ಮರಣಾರ್ಥ ನಿರ್ಮಿಸಲಾಗಿರುವ ಧ್ಯಾನಕೇಂದ್ರದ ಲೋಕಾರ್ಪಣೆಯು ಬುಧವಾರ ನೆರವೇರಿತು.


ಉಡುಪಿಯ ಶ್ರೀ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೂ ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತರ‍್ಥ ಶ್ರೀಪಾದರು ಪುತ್ಥಳಿ ಅಮಾವರಣ ಮತ್ತು ಧ್ಯಾನಕೇಂದ್ರ ಉದ್ಘಾಟಿಸಿದರು .‌
ಪೇಜಾವರ ಶ್ರೀ ವಿಶ್ವಪ್ರಸನ್ನತರ‍್ಥ ಶ್ರೀಪಾದರು , ಶ್ರೀ ಮಠದ ದಿವಾನರಾದ ಎಂ ರಘುರಾಮಾಚರ‍್ಯ , ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು , ಶಿಕ್ಷಕರು ಶಿಕ್ಷಕೇತರ ಸಿಬಂದಿ ಹಾಗೂ ವಿದ್ಯರ‍್ಥಿಗಳು ಹಾಜರಿದ್ದರು.

vtv vitla


ತೀರಾ ಹಿಂದುಳಿದ ಗ್ರಾಮೀಣ ಪ್ರದೇಶವಾಗಿರುವ ರಾಮಕುಂಜದಲ್ಲಿ ಶ್ರೀಗಳು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಈ ಹಳ್ಳಿ ಪ್ರದೇಶದ ಅಸಂಖ್ಯ ಬಡ ಮಕ್ಕಳಿಗೆ ಮಕ್ಕಳಿಗೆ ಪ್ರಾಥಮಿಕ ಪ್ರೌಢ , ಪದವಿಪರ‍್ವ ಹಾಗೂ ಪದವಿ ವರೆಗಿನ ಉತ್ತಮ ಶಿಕ್ಷಣ ಒದಗುವಂತೆ ಮಾಡಿದ್ದು , ಪ್ರಸ್ತುತ ಇಲ್ಲಿ ಎರಡೂವರೆ ಸಾವಿರ ವಿದ್ಯರ‍್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ .

vtv vitla
vtv vitla
- Advertisement -

Related news

error: Content is protected !!