Tuesday, April 23, 2024
spot_imgspot_img
spot_imgspot_img

ರಾಷ್ಟ್ರ ಮಟ್ಟದ ಲೈಫ್ ಸೇವಿಂಗ್ ಸ್ವಿಮ್ಮಿಂಗ್ – ಧನ್ವಿ ಜೆ ರೈಗೆ ಮೂರು ಪದಕ

- Advertisement -G L Acharya panikkar
- Advertisement -

ಜೀವ ರಕ್ಷಕ ಆಟಗಳಲ್ಲಿ ಲೈಫ್ ಸೇವಿಂಗ್ ಗೇಮ್ಸ್ ಪ್ರತಿಷ್ಟಿತವೆನಿಸಿದೆ. ಪುಣೆಯ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಾಲೆವಾಡಿಯಲ್ಲಿ ಲೈಫ್ ಸೇವಿಂಗ್ ಗೇಮ್ಸ್ -2022- ಲೈಫ್ ಸೇವಿಂಗ್ (ಜೀವ ರಕ್ಷಕ ) ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಧನ್ವಿ ಜೆ ರೈ ಯವರು ಭಾಗವಹಿಸಿ, 50 ಮೀ manikin carry – ಪ್ರಥಮ, 100ಮೀ manikin tow -ದ್ವಿತೀಯ ಮತ್ತು 100 ಮೀ obstacle swim – ತೃತೀಯ ಸ್ಥಾನ ಗಳಿಸಿ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳನ್ನು ಪಡೆದಿರುತ್ತಾರೆ.

ಧನ್ವಿ ಜೆ ರೈಯವರು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ, ಸಂತ ಫಿಲೋಮಿನಾ ಹೈ ಸ್ಕೂಲ್ ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ದರ್ಬೆ ಇಲ್ಲಿಯ ಹಳೆ ವಿದ್ಯಾರ್ಥಿನಿಯಾಗಿದ್ದು ಪ್ರಸ್ತುತ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

- Advertisement -

Related news

error: Content is protected !!