Sunday, June 14, 2026
spot_imgspot_img
spot_imgspot_img

ಬೆಳ್ತಂಗಡಿ: ಸರಕಾರಿ ಬಸ್-ಜೀಪು ನಡುವೆ ಅಪಘಾತ; ಜೀಪು ಚಾಲಕ ಗಂಭೀರ ಗಾಯ..!

- Advertisement -
- Advertisement -

ಬೆಳ್ತಂಗಡಿ: ಸರಕಾರಿ ಬಸ್ ಮತ್ತು ಜೀಪು ನಡುವೆ ಅಪಘಾತದಿಂದ ಜೀಪು ಚಾಲಕ ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಬಸಮೆ ಎಂಬಲ್ಲಿ ನಡೆದಿದೆ.

ಗಂಭೀರ ಗಾಯಗೊಂಡ ಜೀಪು ಚಾಲಕ ಸಂಕಪ್ಪ ಪೂಜಾರಿ (ಅಣ್ಣು ಪೂಜಾರಿ) ಎಂದು ಗುರುತಿಸಲಾಗಿದೆ.

ಬೆಳ್ತಂಗಡಿಯಿಂದ ಕೊಯ್ಯರು ಕಡೆಗೆ ಹೋಗುವ ಜೀಪು ಮತ್ತು ಕೊಲ್ಲೂರುನಿಂದ ಬೆಳ್ತಂಗಡಿ ಕಡೆ ಬರುವ ಸರಕಾರಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಜೀಪು ಚಾಲಕ ಸಂಕಪ್ಪ ಪೂಜಾರಿ (ಅಣ್ಣು ಪೂಜಾರಿ) ರವರಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!