Saturday, April 20, 2024
spot_imgspot_img
spot_imgspot_img

ರೈತರ ಖಾತೆ ಸೇರುತ್ತೆ ʼPM Kisanʼ ಯೋಜನೆಯ 10ನೇ ಕಂತಿನ ₹2,000 ಮೊತ್ತ : ಫಲಾನುಭವಿಗಳ ಪಟ್ಟಿ ಹೀಗೆ ಪರಿಶೀಲಿಸಿ.!

- Advertisement -G L Acharya panikkar
- Advertisement -

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಶೀಘ್ರದಲ್ಲೇ ರೈತರ ಖಾತೆಗಳಿಗೆ ಮುಂದಿನ ಕಂತಿನ ಹಣ ಸೇರಲಿದೆ. ಹೌದು, ಯೋಜನೆಯ 10ನೇ ಕಂತಿನ ನಿರೀಕ್ಷೆಯಲ್ಲಿರುವ ರೈತರಿಗೆ, ಡಿಸೆಂಬರ್ 15ರಂದು 2,000 ರೂ. ಜಮೆಯಾಗಲಿದೆ.

2020ರ ಡಿಸೆಂಬರ್ 25ರಂದು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣ ವರ್ಗಾವಣೆ ಮಾಡಿದೆ. ಇಲ್ಲಿಯವರೆಗೆ, ಸರ್ಕಾರವು ದೇಶದ 11.37ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 1.58 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನ ನೇರವಾಗಿ ವರ್ಗಾಯಿಸಿದೆ.

ನೀವು ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿಕೊಂಡಿದ್ರೆ, ನೀವು ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿದ್ದಿರಾ ಎಂದು ನೀವು ತಿಳಿದುಕೊಳ್ಳಬೇಕು.

  1. ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟ್ https://pmkisan.gov.in ಭೇಟಿ ನೀಡಬೇಕಾಗುತ್ತದೆ.
  2. ನೀವು ಅದರ ಮುಖಪುಟದಲ್ಲಿ ಫಾರ್ಮರ್ಸ್ ಕಾರ್ನರ್ ಆಯ್ಕೆಯನ್ನ ನೋಡುತ್ತೀರಿ.
  3. ರೈತರ ಮೂಲೆ ವಿಭಾಗದಲ್ಲಿ ನೀವು ಫಲಾನುಭವಿಗಳ ಪಟ್ಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
  4. ನಂತರ ನೀವು ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನ ಆಯ್ಕೆ ಮಾಡಿ.
  5. ನಂತರ ನೀವು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತ್ರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಇರುತ್ತೆ. ಇದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ವೆಬ್ ಸೈಟ್ ತಲುಪಿದ ನಂತರ, ಬಲಬದಿಯಲ್ಲಿರುವ ಫಾರ್ಮರ್ಸ್ ಕಾರ್ನರ್ (Farmers Corner) . ನಂತರ ಫಲಾನುಭವಿ ಸ್ಥಿತಿ (Beneficiary Status) ಆಯ್ಕೆಯನ್ನ , ನಂತರ ಹೊಸ ಪುಟ ತೆರೆಯುತ್ತದೆ. ಈಗ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನ ನಮೂದಿಸಿ. ನಂತ್ರ ನೀವು ನಿಮ್ಮ ಸ್ಥಿತಿಯ ಸಂಪೂರ್ಣ ವಿವರಗಳನ್ನ ಪಡೆಯುತ್ತೀರಿ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಾಗಿ ನೀವು ಮನೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕಾಗಿ ನಿಮ್ಮ ಫಾರ್ಮ್ ಅಕೌಂಟ್, ಆಧಾರ್ ಕಾರ್ಡ್, ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ನಂಬರ್ ಹೊಂದಿರಬೇಕು. ಇದಕ್ಕಾಗಿ, ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟ್ pmkisan.nic.in ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು.

- Advertisement -

Related news

error: Content is protected !!