Friday, May 3, 2024
spot_imgspot_img
spot_imgspot_img

ರ್‍ಯಾಗಿಂಗ್ ಪ್ರಕರಣ ಭೇದಿಸಲು ವಿದ್ಯಾರ್ಥಿನಿಯಂತೆ ಕಾಲೇಜು ಸೇರಿದ ಲೇಡಿ ಪೊಲೀಸ್

- Advertisement -G L Acharya panikkar
- Advertisement -

ಎಂಜಿಎಂ ವೈದ್ಯಕೀಯ ಕಾಲೇಜಿನ ರ್‍ಯಾಗಿಂಗ್ ಪ್ರಕರಣವನ್ನು ಮಧ್ಯಪ್ರದೇಶದ ಇಂದೋರ್ನ ಪೊಲೀಸರು ವಿಶಿಷ್ಟ ರೀತಿಯಲ್ಲಿ ಭೇದಿಸಿರುವ ಘಟನೆ ವರದಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಲು ಪೊಲೀಸರು ರಹಸ್ಯ ಪೊಲೀಸ್ ಅಧಿಕಾರಿ ಶಾಲಿನಿ ಚೌಹಾಣ್ ಅವ್ರನ್ನ ನೇಮಿಸಿದ್ದು, ಈ ಪ್ರಕರಣವನ್ನ ಬಯಲಿಗೆಳೆಯಲು ಸಜ್ಜಾದ ಶಾಲಿನಿ, ವೈದ್ಯಕೀಯ ವಿದ್ಯಾರ್ಥಿ ಎಂದು ಕಾಲೇಜಿಗೆ ಎಂಟ್ರಿ ಕೊಟ್ಟು ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ್ದಾರೆ.

ಶಾಲಿನಿ ಅವರು ಹಿರಿಯ ವಿದ್ಯಾರ್ಥಿಗಳ ನಡವಳಿಕೆಯನ್ನ ಗಮನಿಸಿದ್ದು, ಅವರ ನಡವಳಿಕೆಯು ತುಂಬಾ ಅಸಭ್ಯ ಮತ್ತು ಆಕ್ರಮಣಕಾರಿಯಾಗಿತ್ತು. ಹೀಗಾಗಿ ಶಾಲಿನಿ ತನ್ನ ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ವರದಿ ನೀಡಿದರು. ನಂತರ ಪೊಲೀಸರು 10 ವಿದ್ಯಾರ್ಥಿಗಳನ್ನ ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇನ್ನು 10 ವಿದ್ಯಾರ್ಥಿಗಳ ಪೈಕಿ 8 ಮಂದಿ ಜಾಮೀನು ಪಡೆದಿದ್ದಾರೆ. ಆದರೆ ಇದೀಗ ಪೊಲೀಸರು ಆರೋಪಿ ವಿದ್ಯಾರ್ಥಿಗಳ ವಿರುದ್ಧ ನ್ಯಾಯಾಲಯಕ್ಕೆ ಚಲನ್ ಸಲ್ಲಿಸಲಿದ್ದಾರೆ.

ಆರೋಪಿಗಳಾದ ಪ್ರೇಮ್ ತ್ರಿಪಾಠಿ, ರಿಷಭ್ ರಾಜ್, ರಾಹುಲ್ ಪಟೇಲ್, ಉಜ್ವಲ್ ಪಾಂಡೆ, ರೌನಕ್ ಪಾಟಿದಾರ್, ಪ್ರಭಾತ್ ಸಿಂಗ್, ಕ್ರಪ್ರಾಂಶು ಸಿಂಗ್, ಚೇತನ್ ವರ್ಮಾ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

ಇಂದೋರ್ನ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನ ರ್ಯಾಗಿಂಗ್ ಮಾಡಿದ ಪ್ರಕರಣ ಜುಲೈ 24 ರಂದು ನಡೆದಿದ್ದು, ಈ ಪ್ರಕರಣವನ್ನು ಭೇಧಿಸಲು ಪೊಲೀಸರು ಅನೇಕ ಶ್ರಮಪಟ್ಟಿದ್ದಾರೆ.

- Advertisement -

Related news

error: Content is protected !!