Thursday, March 28, 2024
spot_imgspot_img
spot_imgspot_img

ಲಂಚ ಕೇಳಿದ ಅಧಿಕಾರಿ; ಚಡ್ಡಿ- ಬನಿಯನ್‌ನಲ್ಲೇ ಅಂದರ್

- Advertisement -G L Acharya panikkar
- Advertisement -

ಉತ್ತರ ಪ್ರದೇಶ: ಜಮೀನು ವಿಷಯವಾಗಿ ವರದಿ ಸಿದ್ಧಪಡಿಸಲು 10 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದ ಉಪ ನಿರೀಕ್ಷಕನೊಬ್ಬ ಭ್ರಷ್ಟಾಚರ ನಿಗ್ರಹ ದಳದ ಬಲೆಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ನಡೆದಿದೆ.

10 ಸಾವಿರ ರೂಪಾಯಿ ಲಂಚಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ ರಾಮ್ ಮಿಲನ್ ಯಾದವ್, ಲಂಚ ಕೊಡಲು ಈ ಅಧಿಕಾರಿ ಅಬ್ದುಲ್ ಖಾನ್ ಎನ್ನುವವರನ್ನು ಮನೆಗೇ ಕರೆದಿದ್ದರಿಂದ ಟವೆಲ್, ಬನಿಯನ್‌ನಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಪೊಲೀಸರು ಅವರನ್ನು ಉಟ್ಟ ಬಟ್ಟೆಯಲ್ಲಿಯೇ ಕರೆದುಕೊಂಡು ಹೋಗಿದ್ದಾರೆ.

ಅಬ್ದುಲ್ ಖಾನ್ ಅವರ ವರದಿ ಸಿದ್ಧಪಡಿಸಲು ರಾಮ್ ಮಿಲನ್ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಮುಂದಿಟ್ಟದ್ದರು. ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಅಬ್ದುಲ್ ಅವರು ದೂರು ದಾಖಲಿಸಿದ್ದರು. ನಂತರ ಲಂಚದ ಹಣ ನೀಡುವುದಾಗಿ ಹೇಳಿದ್ದರಿಂದ ಅವರನ್ನು ಮನೆಗೆ ಕರೆಯಲಾಗಿತ್ತು.

ಲಂಚ ನೀಡುವ ನೆಪದಲ್ಲಿ ಹೋದಾಗ ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!