Friday, March 29, 2024
spot_imgspot_img
spot_imgspot_img

ಲಲಿತ್​ ಮೋದಿ ಜೊತೆ ಮಾಜಿ ಮಿಸ್‌ ಯೂನಿವರ್ಸ್‌ ಡೇಟಿಂಗ್..!

- Advertisement -G L Acharya panikkar
- Advertisement -

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್​ ಇಂಡಿಯನ್​ ಪ್ರೀಮಿಯರ್ ಲೀಗ್​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿ ಮಾಜಿ ಮಿಸ್‌ ಯೂನಿವರ್ಸ್‌ ಸುಶ್ಮಿತಾ ಸೇನ್‌ ಅವರೊಂದಿಗೆ ಡೇಟಿಂಗ್ ನಡೆಸುತ್ತಿರುವುದಾಗಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

2010ರಲ್ಲಿ ಲಲಿತ್ ಮೋದಿ ಭಾರತ ತೊರೆದಿದ್ದಾರೆ. ಕಾರಣವೇನೆಂದರೆ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿ. ಸುಶ್ಮಿತಾ ಸೇನ್​​ 1994ರಲ್ಲಿ ಮಿಸ್ ಯೂನಿವರ್ಸ್‌ ಕಿರೀಟ ತಮ್ಮದಾಗಿಸಿ 1996ರಲ್ಲಿ ದಸ್ತಕ್ ಚಿತ್ರದ ಮೂಲಕ ಬಾಲಿವುಡ್​ ಅಂಗಳ ಪ್ರವೇಶಿಸಿದರು.

ಐಪಿಎಲ್​ ಮಾಜಿ ಚೇರ್ಮನ್​​ ಆಗಿರುವ ಲಲಿತ್ ಮೋದಿ ಸದ್ಯ ಲಂಡನ್​​ನಲ್ಲಿ ವಾಸವಿದ್ದು ‘ನನ್ನ ಬೆಟರ್​ ಹಾಫ್ ಪಾಲುದಾರ’ ಎಂದು ಸುಶ್ಮಿತಾ ಸೇನ್​ ಜೊತೆಗಿನ ಕೆಲವೊಂದು ಫೋಟೋ ಹಂಚಿಕೊಂಡಿದ್ದಾರೆ. ಇವರಿಬ್ಬರು ಮದುವೆ ಮಾಡಿಕೊಂಡಿದ್ದಾರೆಂದು ಅನೇಕ ಸಲ ಸುದ್ದಿ ಸಹ ಬಿತ್ತರಗೊಂಡಿತ್ತು. ಆದರೆ, ಇದೀಗ ಟ್ವೀಟ್ ಮೂಲಕ ಲಲಿತ್ ಮೋದಿ ಸ್ಪಷ್ಟನೆ ನೀಡಿದ್ದು, ಅವರೊಂದಿಗೆ ಡೇಟಿಂಗ್ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!