Sunday, August 2, 2026
spot_imgspot_img
spot_imgspot_img

ಲಾರಿ-ಬೈಕ್ ಡಿಕ್ಕಿ; ಅಪಘಾತದ ರಭಸಕ್ಕೆ ಸ್ಥಳದಲ್ಲೇ ದಂಪತಿ ದುರ್ಮರಣ!

- Advertisement -
- Advertisement -
vtv vitla
vtv vitla

ದೊಡ್ಡಬಳ್ಳಾಪುರ: ಲಾರಿ ಮತ್ತು ಬೈಕ್‌ನ ನಡುವೆ ಅಪಘಾತ ಸಂಭವಿಸಿದ್ದು ಅಪಘಾತದ ರಭಸಕ್ಕೆ ಸ್ಥಳದಲ್ಲಿಯೇ ದಂಪತಿ ದುರ್ಮರಣಕ್ಕೀಡಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕತ್ತಿಹೊಸಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.

ದೊಡ್ಡಬೆಳವಂಗಲ ಗ್ರಾಮದ ಶ್ಯಾಮನಾಯಕ್ (55) ಮತ್ತು ಶಾರದಮ್ಮ(45) ಮೃತ ದಂಪತಿ. ದೊಡ್ಡಬಳ್ಳಾಪುರದಿಂದ ದಾಬಸ್ ಪೇಟೆಗೆ ತೆರಳುವಾಗ ಅಪಘಾತ ನಡೆದಿದೆ. ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!