Monday, April 29, 2024
spot_imgspot_img
spot_imgspot_img

ಲಿಫ್ಟ್‌ನಲ್ಲಿ ಸಿಲುಕಿ ಶಿಕ್ಷಕಿ ಮೃತ್ಯು

- Advertisement -G L Acharya panikkar
- Advertisement -

ಲಿಫ್ಟ್‌ ನಲ್ಲಿ ಸಿಲುಕಿ 26 ವರ್ಷದ ಟೀಚರ್‌ ಮೃತಪಟ್ಟ ಆಘಾತಕಾರಿ ಘಟನೆ ಶಾಲೆಯಲ್ಲಿ ನಡೆದಿದೆ. ಉತ್ತರ ಮುಂಬೈನ ಮಲಡ್‌ ಬಳಿಯ ಚಿಂಚೊಳ್ಳಿ ಬಂದರ್‌ ಬಳಿಯ ಸೇಂಟ್‌ ಮೇರಿಸ್‌ ಇಂಗ್ಲೀಷ್‌ ಪ್ರೌಢಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ಜೆನೆಲ್‌ ಫರ್ನಾಂಡೀಸ್‌ ಮೃತಪಟ್ಟ ಟೀಚರ್.

ಸೆ. 16 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ 2ನೇ ಮಹಡಿಗೆ ಹೋಗಲು ಶಾಲೆಯ 6 ಮಹಡಿಯಲ್ಲಿ ಲಿಫ್ಟ್‌ ಗೆ ಕಾಯುತ್ತಿದ್ದ ಜೆನೆಲ್‌ ಫರ್ನಾಂಡೀಸ್‌ ಲಿಫ್ಟ್‌ ಒಳಗೆ ಪ್ರವೇಶಿಸುತ್ತಿದ್ದಂತೆ ಬಾಗಿಲು ಹಾಕಿಕೊಂಡಿದೆ. ಲಿಫ್ಟ್‌ ಬಾಗಿಲು ಹಾಕಿಕೊಂಡಾದ ಟೀಚರ್‌ ಕಾಲು ಬಾಗಿಲ ನಡುವೆ ಸಿಲುಕಿಕೊಂಡಿದೆ. ಲಿಫ್ಟ್‌ ಕಳಗೆ ಹೋದಂತೆ ಟೀಚರ್‌ ಅವರ ತಲೆ ಬಡಿದು ನಜ್ಜುಗುಜ್ಜಾಗಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡು ಬಂದಿದೆ.

ಲಿಫ್ಟ್‌ ನಲ್ಲಿ ಟೀಚರ್‌ ಸಿಲುಕಿಕೊಂಡಿರುವುದು ತಿಳಿಯುತ್ತಿದ್ದಂತೆ ಶಾಲೆಯ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾರಿ ಮಧ್ಯದಲ್ಲೇ ಅಸುನೀಗಿದ್ದಾರೆ. ಪೊಲೀಸರು ಆಕಸ್ಮಿಕ ಘಟನೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಒಂದು ವೇಳೆ ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

astr
- Advertisement -

Related news

error: Content is protected !!