Friday, May 3, 2024
spot_imgspot_img
spot_imgspot_img

ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯ ಕೊಲೆ; ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

- Advertisement -G L Acharya panikkar
- Advertisement -

ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯನ್ನು ಕಡಿದು ಕೊಂದು ಜೈಲುಸೇರಿದ್ದ ಆಸಾಮಿ ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಕೇರಳದ ಪೂಜಾಪುರ ಸೆಂಟ್ರಲ್ ಜೈಲಿನಲ್ಲಿ ಈ ಘಟನೆ ಸಂಭವಿಸಿದೆ. ರಾಕೇಶ್ (49) ಎಂಬುವವರು ತನ್ನೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಸಿಂಧು (48) ಎಂಬಾಕೆಯನ್ನು ಹಗಲು ಹೊತ್ತಿನಲ್ಲೇ ಜನದಟ್ಟಣೆಯ ರಸ್ತೆಯಲ್ಲಿ ಹೊಡೆದು ಕೊಂದಿದ್ದರು. ಈ ಆರೋಪದ ಮೇಲೆ ಜೈಲು ಸೇರಿದ್ದರು.

ರಾಕೇಶ್ ಮತ್ತು ಸಿಂಧು ಇಬ್ಬರಿಗೂ ಈ ಮೊದಲೇ ಮದುವೆಯಾಗಿತ್ತು ಮತ್ತು ಸ್ಥಳೀಯ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಅವರು ಕಳೆದ 12 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಇತ್ತೀಚೆಗಷ್ಟೇ ರಾಕೇಶ್ ಸಿಂಧುವಿನಿಂದ ದೂರವಾಗಿದ್ದು, ಆಕೆ ತನ್ನ ಸಹೋದರಿಯೊಂದಿಗೆ ವಾಸವಿದ್ದು, ರಾಕೇಶ್ ಒಂಟಿಯಾಗಿ ವಾಸವಾಗಿದ್ದ. ತನ್ನ ಮಗಳ ಮದುವೆ ಬಳಿಕ ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಜಗಳ ಏರ್ಪಟ್ಟಿದೆ.

ಇದೇ ಕೋಪದಿಂದ ರಾಕೇಶ್‌ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಿಂಧು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಪೊಲೀಸರು ರಾಕೇಶ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಂಧಿಸಿದ ತಕ್ಷಣ ಮಾನಸಿಕ ಅಸಮತೋಲನ ಪ್ರದರ್ಶಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!