Tuesday, May 7, 2024
spot_imgspot_img
spot_imgspot_img

ಕಲ್ಲಡ್ಕ: ಬಸ್ಸು ಹೊಂಡಕ್ಕೆ ಬಿದ್ದು ಪ್ರಯಾಣಿಕನ ಬೆನ್ನು ಮೂಳೆ ಮುರಿತ; ಬಡ ಯುವಕನ ಪ್ರಾಣಕ್ಕೆ ಮುಳುವಾದ ರಸ್ತೆಹೊಂಡ; ಈ ದುರಂತಕ್ಕೆ ಯಾರು ಹೊಣೆ..?

- Advertisement -G L Acharya panikkar
- Advertisement -

ಬಂಟ್ವಾಳ: ಸರಕಾರಿ ಬಸ್ ಚಾಲಕನ‌ ನಿರ್ಲಕ್ಷ್ಯತನದ ಚಾಲನೆ ಹಾಗೂ ‌ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ವಹಣೆ ಇಲ್ಲದ ರಸ್ತೆ ಕಾಮಗಾರಿಯ ಅವಾಂತರದಿಂದ ಬಡಪಾಯಿ ತನ್ನದಲ್ಲದ ತಪ್ಪಿಗೆ ವ್ಯಕ್ತಿಯೋರ್ವನ ಬೆನ್ನುಮೂಳೆ ಮುರಿತಕ್ಕೊಳಪಟ್ಟ ಘಟನೆ ನಡೆದಿದೆ. ಗಾಯಳುವನ್ನು ಪಾಣೆಮಂಗಳೂರು ಉಪ್ಪುಗುಡ್ಡೆ ನಿವಾಸಿ ಆರ್.ವಿಜಯಕುಮಾರ್ (41) ಎಂದು ಗುರುತಿಸಲಾಗಿದೆ.

.ವಿಜಯಕುಮಾರ್ ಮಂಗಳೂರಿನಿಂದ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಕಲ್ಕಡ್ಕ ಸಮೀಪದ ಗೋಳ್ತಮಜಲು ಎಂಬಲ್ಲಿ ಬಸ್ ಚಾಲಕನ ನಿರ್ಲಕ್ಷ್ಯ ತನದ ಚಾಲನೆಯಿಂದ ಹೊಂಡಗುಂಡಿಗಳನ್ನು ತಪ್ಪಿಸಲು ಹೋಗಿ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಇದರ ಪರಿಣಾಮವಾಗಿ ಬಸ್ಸಿನ ಕೊನೆಯ ಸೀಟಿನಲ್ಲಿ ಕುಳಿತಿದ್ದ ವಿಜಯ ಕುಮಾರ್‍ ಸೀಟಿನಿಂದ ಮೇಲಕ್ಕೆ ಹಾರಿ ಬಸ್ಸಿನ ಒಳಗೆ ಬಿದ್ದ ಪರಿಣಾಮ ಸೊಂಟಕ್ಕೆ ಗುದ್ದಿ ಮುರಿತಕ್ಕೆ ಒಳಗಾಗಿದೆ.

ಕೂಡಲೇ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಚಿಕಿತ್ಸೆ ಪಡೆಯುತ್ತಿದ್ದಾರೆ. ಅಜಾಗರೂಕತೆಯ ಚಾಲನೆಗಾಗಿ ಚಾಲಕನ ಮೇಲೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೊಂಟದಿಂದ ಕೆಳಗಿನ ಭಾಗ ಜೀವ ಕಳಕೊಂಡಂತಿದೆ..!
ಬೆನ್ನುಮೂಳೆಗೆ ಏಟು ಬಿದ್ದಿದ್ದು, ಎದ್ದು ಕೂರುವುದಕ್ಕೂ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ. ಸೊಂಟದಿಂದ ಕೆಳಗಿನ ಭಾಗ ಜೀವ ಕಳಕೊಂಡಂತಿದೆ. ಬೆನ್ನು ಮೂಳೆಯ ಆಪರೇಶನ್ ಮಾಡಬೇಕು, ಕೆಎಂಸಿಗೆ ಹೋಗಬೇಕು ಎಂದು ವೆನ್ಲಾಕ್ ವೈದ್ಯರು ತಿಳಿಸಿದ್ದಾರಂತೆ. ಬಡ ಕುಟುಂಬದ ವಿಜಯ ಕುಮಾರ್ ತಾನು ಮಾಡದ ತಪ್ಪಿಗೆ ಈ ಸ್ಥಿತಿಯಾಗಿದ್ದರಿಂದ ದಿಕ್ಕೆಟ್ಟು ಹೋಗಿದ್ದು, ಕುಟುಂಬಸ್ಥರು ತೀವ್ರ ನೊಂದುಕೊಂಡಿದ್ದಾರೆ. ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳನ್ನು ಹೊಂದಿದ್ದಾರೆ. ಹೆದ್ದಾರಿ ಅವ್ಯವಸ್ಥೆಯಿಂದಾಗಿ ಆಗಿರುವ ದುರಂತದಿಂದ ಬಡ ಕುಟುಂಬದ ಆಧಾರ ಸ್ತಂಭವೇ ಕಳಚಿದಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಾಗಿದೆ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಕಂಪನಿಯಿಂದ ಅಥವಾ ಕೆಎಸ್‌ಆರ್‌ಟಿಸಿ ಕಡೆಯಿಂದ ಪರಿಹಾರ ಸಿಗಬಹುದೇ ಎನ್ನುವ ನಿರೀಕ್ಷೆಯಲ್ಲಿದೆ ಕುಟುಂಬ.

- Advertisement -

Related news

error: Content is protected !!