Sunday, June 21, 2026
spot_imgspot_img
spot_imgspot_img

ಲೈಫ್ ಒಂಜಿ ಸರ್ಕಸ್ ಅವೆಟ್ ಉಂಡು ಸಕ್ಸಸ್..! ವಿಭಿನ್ನವಾಗಿ ಮೂಡಿ ಬಂದಿದೆ ಐಸಬಾಸ್‌ ಆಲ್ಬಂ ಸಾಂಗ್‌

- Advertisement -
- Advertisement -

ಗೆಳೆಯರ ಗುಂಪೊಂದು ಕಷ್ಟದಲ್ಲಿರುವ ತಮ್ಮ ಗೆಳಯನಿಗೆ ಹಾಡಿನ ಮೂಲಕ ಸಾಂತ್ವನ ಹೇಳಿ ಖುಷಿಪಡಿಸುವ ಸಿಂಪಲ್ ಕಥಾ ಹಂದರವಿರುವ ವಿಭಿನ್ನ ಶೈಲಿಯ ಆಲ್ಬಂ ಸಾಂಗ್ ಬಿಡುಗಡೆಗೊಂಡಿದೆ. ಐಸಬಾಸ್‌ ಎಂಬ ಹಾಡು ಈಗಾಗಲೇ ಬಿಡುಗಡೆಗೊಂಡಿದ್ದು ಸಿಂಪಲ್ ಕಾನ್ಸೆಪ್ಟ್‌ನಲ್ಲಿ ಕ್ಲಿಕ್ ಆಗಿದ್ದಾರೆ.

ವಿವಾನ್ ಪ್ರೊಡಕ್ಷನ್ ಅರ್ಪಿಸುವ ವಿದ್ಯಾ ವೇಣುಗೋಪಾಲ ಆಚಾರ್ಯ ನಿರ್ಮಾಣದಲ್ಲಿ ಮೂಡಿಬಂದಿರುವ ಐಸಬಾಸ್‌ ಹಾಡಿಗೆ ಚೇತನ್ ಕೆ ವಿಟ್ಲ ಇವರ ಸಾಹಿತ್ಯ, ರಾಗ ಸಂಯೋಜನೆ ಹಾಗೂ ನಿರ್ದೇಶನ ಮಾಡಿದ್ದಾರೆ. V4 Vaishu Creations youtube ಚಾನೆಲ್ ನಲ್ಲಿ ಈಗಾಗಲೇ ಬಿಡುಗಡೆಗೊಂಡು ಎಲ್ಲೆಡೆ ವೈರಲ್ ಆಗುತ್ತಿದೆ.

ಅಶ್ವಿನ್ ಬಾಬಣ್ಣ ಇವರ ಸಂಗೀತದಲ್ಲಿ, ಭವಾನಿ ಶಂಕರ್ ಇವರ ಸಿರಿ ಕಂಠದಲ್ಲಿ ಮೂಡಿಬಂದಿರುವ ಈ ಹಾಡಿಗೆ ಅಚಲ್ ವಿಟ್ಲ ಇವರ ಸಹ ನಿರ್ದೆಶನವಿದೆ. ಬಾತು ಕುಲಾಲ್ ಇವರ ಛಾಯಗ್ರಹಣ ಹಾಗೂ ಸಂಕಲನವಿದೆ.

MGK ಶಿಲ್ಪಾ ಕಲಾ ತಂಡದ ಹೊಸ ಪ್ರಯತ್ನವಾಗಿದ್ದು ಈ ಆಲ್ಬಂ ಹಾಡಿನಲ್ಲಿ ಈ ತಂಡ ಕಲಾ ಚತುರತೆಯನ್ನು ಕಾಣಬಹುದಾಗಿದೆ. ವಿಭಿನ್ನವಾಗಿ ಮೂಡಿ ಬಂದಿರುವ ಈ ಹಾಡು ಜನರನ್ನು ಸೆಳೆಯುತ್ತದೆ ಎಂದರೆ ತಪ್ಪಾಗಲಾರದು.

ಕಲರ್ ಫುಲ್ ಸೆಟ್ ಹಾಕಿ ಸುಂದರವಾಗಿ ಚಿತ್ರೀಕರಿಸಿದೆ ಆಲ್ಬಂ ಸಾಂಗ್ ತಂಡಡ. ಇನ್ನು ಇದರಲ್ಲಿ ನಟಿಸಿರುವ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮುಖ್ಯವಾಗಿ ಐಸಬಾಸ್‌ನ ಸಂಕಲನ ಮತ್ತು ಛಾಯಾಗ್ರಹಣವು ಅಚ್ಚುಕಟ್ಟಾಗಿ ಹಾಗು ನಯನಮನೋಹರವಾಗಿ ಮೂಡಿ ಬಂದಿದೆ. ನೀವಿನ್ನು ಈ ಆಲ್ಬಂ ಸಾಂಗ್‌ ಅನ್ನು ವೀಕ್ಷಿಸದೇ ಇದ್ದಲ್ಲಿ ಈ ಕೂಡಲೇ ವೀಕ್ಷಿಸಿ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿ.

- Advertisement -

Related news

error: Content is protected !!