Monday, April 29, 2024
spot_imgspot_img
spot_imgspot_img

ಲೈವ್‌ನಲ್ಲೇ ವಿಷ ಸೇವಿದ ಒಂದೇ ಕುಟುಂಬದ ಮೂವರು; ಪೋರ್ನ್​ಸ್ಟಾರ್​ ಒಬ್ಬಳ ಕುತಂತ್ರವೇ ಇದಕ್ಕೆಲ್ಲಾ ಕಾರಣ..!?

- Advertisement -G L Acharya panikkar
- Advertisement -

ಒಂದೇ ಕುಟುಂಬದ ಮೂವರು ಲೈವ್ ವಿಡಿಯೊ ಮಾಡುತ್ತಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮೂವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದೆ. ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಒಬ್ಬಳು ಪೋರ್ನ್​ಸ್ಟಾರ್​ ಎಂಬ ಸ್ಪೋಟಕ ಮಾಹಿತಿಯನ್ನು ಲೈವ್‌ನಲ್ಲಿ ಬಿಚ್ಚಿಟ್ಟಿದ್ದಾರೆ.

ಲೈವ್​ ವಿಡಿಯೊದಲ್ಲಿ ವಿಷ ಸೇವನೆ ಮಾಡಿದ್ದು ಉಜ್ಜಯಿನಿ ಮೂಲದ ಬಟ್ಟೆ ವ್ಯಾಪಾರಿ ಅಶಿ ಖಾನ್ ಎಂಬುವರ ಕುಟುಂಬ. ಅಂದರೆ ಅವರು ತನ್ನ ಅಮ್ಮ ಮತ್ತು ಪತ್ನಿಯೊಂದಿಗೆ ಸೇರಿ ವಿಷ ಕುಡಿದಿದ್ದಾರೆ. ಈ ವೇಳೆ ತಮಗೆ ಆದ ತೊಂದರೆಯನ್ನು ಬಿಚ್ಚಿಟ್ಟಿದ್ದಾರೆ.

ಹೀಗೆ ‘ನನ್ನ ಹೆಸರು ಅಶಿ ಖಾನ್​.. ನಾನು ಈ ಹಿಂದೆ ಮುಂಬಯಿಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದೆ. ಆಗ ಒಂದು ಹುಡುಗಿಯ ಪರಿಚಯವಾಗಿತ್ತು. ಅವಳು ಅಶ್ಲೀಲ ಚಿತ್ರತಾರೆಯಾಗಿದ್ದಳು. ನಂತರದ ದಿನಗಳಲ್ಲಿ ಅವಳು ನನ್ನ ಮೇಲೆ ಸುಳ್ಳು ರೇಪ್​ ಕೇಸ್​ ದಾಖಲಿಸಿದಳು. ಮುಂಬಯಿ ಪೊಲೀಸರಿಗೆ ದೂರು ಕೊಟ್ಟಳು. ಉಜ್ಜಯಿನಿಯಲ್ಲೂ ಕೇಸ್​ ದಾಖಲು ಮಾಡಿದಳು. ನಾನು ಮುಂಬಯಿಯಿಂದ ಬಂದು ಉಜ್ಜಯಿನಿಯಲ್ಲಿ ಜೈಲುಪಾಲಾದೆ. ಅಲ್ಲಿಂದ ಹೊರಬಂದೆ. ಆಗಿನಿಂದಲೂ ನನ್ನನ್ನು ಅವಳು ಬೆದರಿಸುತ್ತಲೇ ಇದ್ದಾಳೆ’.

ನನ್ನ ಮದುವೆ ಸಮಯದಲ್ಲಿ ಕರೆ ಮಾಡಿ, ‘ನಮ್ಮಿಬ್ಬರಿಗೂ ಅನೈತಿಕ ಸಂಬಂಧ ಇದೆ ಎಂದು ಹೇಳುತ್ತೇನೆ’ ಎಂದು ಹೆದರಿಸಿ ಹಣ ಪಡೆದಳು. ಆಗಿನಿಂದಲೂ ಪದೇಪದೆ ಇದನ್ನೇ ಮಾಡುತ್ತಿದ್ದಾಳೆ. ಇನ್ನು ಹಣ ಕೊಡಲು ಸಾಧ್ಯವಿಲ್ಲ. ಮನೆ ಮರ್ಯಾದಿಯೂ ಹೋಗುತ್ತಿದೆ. ನಾವೆಲ್ಲ ಒಟ್ಟಾಗಿ ಸಾಯುತ್ತಿದ್ದೇವೆ’ ಎಂದು ಅಶಿ ಖಾನ್​ ಹೇಳಿಕೊಂಡಿದ್ದಾರೆ. ಹಾಗೇ, ಅಲ್ಲೇ ಟೇಬಲ್​ ಮೇಲೆ ಇದ್ದ ಮೂರು ಲೋಟದಲ್ಲಿ ವಿಷ ಬೆರೆಸಿಕೊಂಡು ಕುಡಿದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!