Saturday, May 18, 2024
spot_imgspot_img
spot_imgspot_img

ಲ್ಯಾಪ್‌ಟಾಪ್‌ ರಿಪೇರಿಗೆ ಬಂದು ಮಹಿಳೆಯ ಖಾಸಗಿ ಪೋಟೋಗಳನ್ನು ಕದ್ದು ಬ್ಲಾಕ್ ಮೇಲ್

- Advertisement -G L Acharya panikkar
- Advertisement -

ಬೆಂಗಳೂರು: ಲ್ಯಾಪ್‌ಟಾಪ್‌ ರಿಪೇರಿ ವೇಳೆ ಮಹಿಳೆಯ ಖಾಸಗಿ ಫೋಟೋಗಳನ್ನು ಕದ್ದು ಬಳಿಕ ಆಕೆಗೆ ಬ್ಲಾಕ್​ಮೇಲ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಾಗಲಗುಂಟೆ ಪೊಲೀಸರು​ ಬಂಧಿಸಿದ್ದಾರೆ.

ಬಂಧಿತನನ್ನು ದಾಸರಹಳ್ಳಿಯ ಮಹೇಶ್ವರಿ ನಗರದ ನಿವಾಸಿ ಪ್ರವೀಣ್​ ರಾವ್​ ಎಂದು ಗುರುತಿಸಲಾಗಿದೆ. ಮಹಿಳೆಯೋರ್ವಳು ಲ್ಯಾಪ್‌ಟಾಪ್‌ ರಿಪೇರಿಗೆಂದು ಈತನನ್ನು ಮನೆಗೆ ಕರೆಸಿದ್ದಳು. ಈ ವೇಳೆ ಲ್ಯಾಪ್‌ಟಾಪ್‌ನಲ್ಲಿದ್ದ ಮಹಿಳೆಯ ಖಾಸಗಿ ಫೋಟೋಗಳನ್ನು ಕದ್ದು ಬಳಿಕ ಆಕೆಗೆ ಬ್ಲಾಕ್‌ಮೇಲ್‌ ಮಾಡಲು ಆರಂಭಿಸಿದ್ದಾನೆ. ಅಲ್ಲದೆ, ಆಕೆಯ ಪತಿಯ ಮೊಬೈಲ್‌ಗೂ ಶೇರ್‌ ಮಾಡಿದ್ದಾನೆ. ಈ ಸಂಬಂಧ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಆತನ ಕಿರುಕುಳದಿಂದ ಬೇಸತ್ತ ಮಹಿಳೆ ಪೊಲೀಸ್‌ ದೂರು ನೀಡಿದ್ದಾಳೆ.

- Advertisement -

Related news

error: Content is protected !!