Wednesday, April 24, 2024
spot_imgspot_img
spot_imgspot_img

ವಂಚನೆಗೀಡಾದ ಠೇವಣಿದಾರರಿಗೆ 90 ದಿನದೊಳಗೆ ₹5 ಲಕ್ಷ ವಿಮೆ; ನಿರ್ಮಲಾ ಸೀತಾರಾಮನ್

- Advertisement -G L Acharya panikkar
- Advertisement -

ನವದೆಹಲಿ: ಹಣಕಾಸು ವಂಚನೆಗೀಡಾದ ಬ್ಯಾಂಕ್​ಗಳ ಠೇವಣಿದಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯೊಂದು ಕೊಟ್ಟಿದೆ. ಡೆಪಾಸಿಟ್ ಇನ್ಷೂರೆನ್ಸ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್​ (DICGC) ಕಾಯ್ದೆಗೆ ತಿದ್ದುಪಡಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಕುರಿತು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅಧಿಕೃತ ಮಾಹಿತಿ ಹೊರಹಾಕಿದ್ದಾರೆ. ಬ್ಯಾಂಕಿನಿಂದ ವಂಚನೆಗೀಡಾದವರಿಗೆ ಠೇವಣಿ ಮಾಡಿದ ಒಟ್ಟು ಮೊತ್ತದ ಪೈಕಿ ಇನ್ಷೂರೆನ್ಸ್ ಹಣವಾದ 5 ಲಕ್ಷ ರೂಪಾಯಿ ನೀಡಲಾಗುವುದು. ಅದು ಬ್ಯಾಂಕ್​ ಮೇಲೆ ನಿರ್ಬಂಧ ಹೇರಿದ 90 ದಿನದೊಳಗೆ ಈ ಇನ್ಷೂರೆನ್ಸ್ ಹಣ ಸಿಗಲಿದೆ.

ಆರ್​​ಬಿಐ ಬ್ಯಾಂಕ್​​ ಮೇಲೆ ನಿರ್ಬಂಧ ಹೇರಿದ ಬಳಿಕ ಕಷ್ಟಕ್ಕೆ ಎದುರಾದ ಜನರಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಈ ಕಾಯ್ದೆಗೆ​​ ಅನುಮೋದನೆ​​ ನೀಡಲಾಗಿದೆ. ಕಾನೂನಿನಡಿ ಶೇ 98.3ರಷ್ಟು ಬ್ಯಾಂಕ್​ ಖಾತೆಗಳು ಸಂಪೂರ್ಣ ಸುರಕ್ಷಿತ. ಡಿಐಸಿಜಿಸಿ ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾದ ಅಂಗ ಸಂಸ್ಥೆ. ಇದು ಬ್ಯಾಂಕ್ ಠೇವಣಿಗೆ ಇನ್ಷೂರೆನ್ಸ್ ಒದಗಿಸುತ್ತದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

- Advertisement -

Related news

error: Content is protected !!