Monday, April 29, 2024
spot_imgspot_img
spot_imgspot_img

ವಿಟ್ಲ: ರಮಾನಾಥ ರೈ ಕುರಿತಂತೆ ಹೇಳಿಕೆ ಮತ್ತು ಸುಳ್ಳು ಸುದ್ದಿ ಹರಡಿಸುತ್ತಿದ್ದ ಆರೋಪ; ವೆಂಕಟೇಶ್ ಕುಮಾರ್ ಭಟ್ ಬದಿಕೋಡಿ ಸ್ಪಷ್ಟನೆ

- Advertisement -G L Acharya panikkar
- Advertisement -

ವಿಟ್ಲ: ರಾಜಕೀಯ ವ್ಯಕ್ತಿಗಳ ಕುರಿತಂತೆ ಹೇಳಿಕೆ ಮತ್ತು ಸುಳ್ಳು ಸುದ್ದಿ ಹರಡಿಸುತ್ತಿದ್ದ ಆರೋಪದ ಮೇಲೆ ಕನ್ಯಾನ ಗ್ರಾಮದ ಮಾಜಿ ತಾಲೂಕು ಪಂಚಾಯತ್ ಸದಸ್ಯ ವೆಂಕಟೇಶ್ ಕುಮಾರ್ ಭಟ್ ಬದಿಕೋಡಿ ಇವರ ಮೇಲೆ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ವಿಟ್ಲ ಠಾಣೆಗೆ ದೂರು ನೀಡಿದ್ದರು. ಹಾಗೂ ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಇದೀಗ ಈ ವಿಚಾರವಾಗಿ ವೆಂಕಟೇಶ್ ಕುಮಾರ್ ಭಟ್ ವಿಟ್ಲ ಪೊಲೀಸ್ ಠಾಣೆಗೆ ಸ್ಪಷ್ಟನೆ ನೀಡಿದ್ದಾರೆ.


ವೆಂಕಟೇಶ್ ಕುಮಾರ್ ಭಟ್ ತಮ್ಮ ಹೇಳಿಕೆಯಲ್ಲಿ ಈ ರೀತಿಯಾಗಿ ಸ್ಪಷ್ಟನೆ ನೀಡಿದ್ದು, “ನಾನು 20.09.2022 ರಂದು ಬಂಟ್ವಾಳ ರಮಾನಾಥ ರೈಯವರು ಮಸೂದ್, ಫಾಝಿಲ್, ಕುಟುಂಬದ ಕಣ್ಣೀರ ಶಾಪ ತಟ್ಟುವ ಮೊದಲು ಪರಿಹಾರ ಕೊಡಿ” ಎಂಬ ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು “ಶರತ್ ಮಡಿವಾಳ, ಪ್ರಶಾಂತ್ ಪೂಜಾರಿ, ದೀಪಕ್ ರಾವ್ ಗೆ ಎಷ್ಟು ಎಷ್ಟು ಪರಿಹಾರ ಕೊಟ್ಟಿದೀರಿ? ಉಸ್ತುವಾರಿ ಸಚಿವನಾಗಿ ಕಲ್ಲಡ್ಕ ಶಾಲೆಯ ಮಕ್ಕಳ ಅನ್ನವನ್ನು ಕಸಿದುಕೊಂಡಾಗ ಕಣ್ಣೀರ ಶಾಪ ನೆನಪಾಗಲಿಲ್ಲವೇ..? ಕಣ್ಣೀರು…,ಶಾಪ… ಇದೆಲ್ಲಾ ಓಟು ಬರುವಾಗ ನೆನಪಾಗಿ ಏನೂ ಪ್ರಯೋಜನವಿಲ್ಲ, ಉಸ್ತುವಾರಿ ಸಚಿವನಾಗಿದ್ದಾಗ ಅಧಿಕಾರದ ಮದದಿಂದ ತೋರಿಸಿದ ಅಹಂಕಾರದ ವರ್ತನೆಯನ್ನು ಜನ ಇನ್ನೂ ಮರೆತಿಲ್ಲ. ಹಾಗೂ ಓ ದೇವರೇ… ಇಂತಹವರಿಗೆ ಒಳ್ಳೆಯ ಬುದ್ಧಿಯನ್ನು ಇನ್ನಾದರೂ ಅನುಗ್ರಹಿಸಿ At least ಇವರೇ ಹೇಳುವ ಜಾತ್ಯಾತೀತ ಮನಸ್ಥಿತಿಯನ್ನಾದರೂ ಕರುಣಿಸಿ.. ಯಾಕೆಂದರೆ ಈ ಮೊದಲು ಕಬೀರ್ ಎಂಬವನಿಗೆ ನೀವು ಪರಿಹಾರ ಕೊಟ್ಟು ಉಳಿದವರಿಗೆ ಪರಿಹಾರ ನೀಡದೆ ಇದ್ದದ್ದು ಇವರುಗಳ ನಿಜವಾದ ಜಾತ್ಯಾತೀತ ಮನಸ್ಥಿತಿಗೆ ಸಾಕ್ಷಿ” ಎಂಬುವುದಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುತ್ತೇನೆ.

ಆದರೆ ಈ ಬಗ್ಗೆ ಸುದೀಪ್ ಕುಮಾರ್ ಶೆಟ್ಟಿಯವರು ವಿಟ್ಲ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ದ ನೀಡಿರುವ ದೂರಿನಲ್ಲಿ ಪ್ರವೀಣ್ ನೆಟ್ಟಾರು ಬಗ್ಗೆ ಪ್ರಸ್ತಾಪ ಮಾಡಿದ್ದು, ನಾನು ಮಾಡಿರುವ ಪೋಸ್ಟ್ ನಲ್ಲಿ ಪ್ರವೀಣ್ ನೆಟ್ಟಾರು ಬಗ್ಗೆ ಯಾವುದೇ ಪೋಸ್ಟ್ ಹಾಕಿರುವುದಿಲ್ಲ. ಆದರೆ ಸುದೀಪ್ ಕುಮಾರ್ ಶೆಟ್ಟಿಯವರು ನೀಡಿರುವ ದೂರಿನಲ್ಲಿ ನಾನು ಹಾಕಿರುವ ಈ ಪೋಸ್ಟ್ ನ ಬಗ್ಗೆ ಕೋಮು ಪ್ರಚೋದನಕಾರಿ ಹೇಳಿಕೆ ಮತ್ತು ಸುಳ್ಳು ಸುದ್ದಿಗಳನ್ನು ಕೋಮು ಸಂಘರ್ಷ ಆಗಿರುವ ರೀತಿಯಲ್ಲಿ ಪೋಸ್ಟ್ ಗಳನ್ನು ಹಾಕಿರುತ್ತೇನೆ ಎಂಬುವುದಾಗಿ ಉಲ್ಲೇಖಿಸಿ ದೂರನ್ನು ನೀಡಿರುತ್ತಾರೆ. ಆದರೆ ಸುದೀಪ್ ಕುಮಾರ್ ಶೆಟ್ಟಿಯವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವಂತೆ “ನಾನು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಕೋಮು ಸಂಘರ್ಷ, ಕೋಮು ಪ್ರಚೋದನೆ ಸಂಬಂಧಿಸಿದ ಪ್ರಚೋದನಾಕಾರಿ ಹೇಳಿಕೆಗಳನ್ನು ಹಾಗೂ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದಿಲ್ಲ ಹಾಗೂ ಮಾಜಿ ಸಚಿವರಾದ ರಮಾನಾಥ ರೈಯವರನ್ನು ವೈಯುಕ್ತಿವಾಗಿ ನಿಂದಿಸಿ ಅವಹೇಳನಕರವಾದ ಪೋಸ್ಟ್ ಹಾಕಿರುವುದಿಲ್ಲ. ನಾನು ನನ್ನ ಹೇಳಿಕೆಯಲ್ಲಿ ನೀಡಿರುವ ಪೋಸ್ಟ್ ನ್ನು ಮಾತ್ರ ಹಾಕಿರುತ್ತೇನೆಯೇ ವಿನಃ, ದೂರುದಾರರು ದೂರಿನಲ್ಲಿ ತಿಳಿಸಿರುವ ಕೋಮು ಪ್ರಚೋದನಾಕಾರಿಯಾದ ಯಾವ ಪೋಸ್ಟ್ ಗಳನ್ನು ಕೂಡಾ ಪೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವುದಿಲ್ಲ” ಎಂಬುವುದಾಗಿ ವಿಟ್ಲ ಪೊಲೀಸ್ ಠಾಣೆಗೆ ಸ್ಟಷ್ಟನೆ ನೀಡಿದ್ದಾರೆ.


ಈ ಸಂದರ್ಭದಲ್ಲಿ ರವೀಶ ಶೆಟ್ಟಿ ಕರ್ಕಳ ಪ್ರಧಾನ ಕಾರ್ಯದರ್ಶಿ ಬಿಜೆಪಿ ಬಂಟ್ವಾಳ ಮಂಡಲ, ವಿಶ್ವನಾಥ ಪೂಜಾರಿ ಕಟ್ಟತ್ತಿಲ ಅಧ್ಯಕ್ಷರು, ರೈತಮೋರ್ಚಾ ಬಂಟ್ವಾಳ, ಶಿವಪ್ರಸಾದ್ ಶೆಟ್ಟಿ ಕರೋಪಾಡಿ ಅಧ್ಯಕ್ಷರು, ಕೊಳ್ನಾಡು ಮಹಾಶಕ್ತಿಕೇಂದ್ರ ಬಿಜೆಪಿ, ಅರವಿಂದ ರೈ ಮೂರ್ಜೆಬೆಟ್ಟು ಪ್ರಧಾನ ಕಾರ್ಯದರ್ಶಿ, ವಿಟ್ಲ ಪಡ್ನೂರು ಮಹಾಶಕ್ತಿ ಕೇಂದ್ರ, ವಿನೋದ್ ಶೆಟ್ಟಿ ಪಟ್ಲ ಉಪಾಧ್ಯಕ್ಷರು, ಬಿಜೆಪಿ ಯುವ ಮೋರ್ಚಾ ಬಂಟ್ವಾಳ, ಉದಯರಮಣ ಭಟ್ ಕನ್ಯಾನ ಪ್ರಮುಖರು, ಬಿಜೆಪಿ ಶಕ್ತಿಕೇಂದ್ರ ಕನ್ಯಾನ ಉಪಸ್ಥಿತರಿದ್ದರು.

astr
- Advertisement -

Related news

error: Content is protected !!