Tuesday, June 16, 2026
spot_imgspot_img
spot_imgspot_img

”ವರಾಹ ರೂಪಂ” ಹಾಡಿಗೆ ನೃತ್ಯ ; ವಿದ್ಯಾರ್ಥಿ ಮೈಮೇಲೆ ಆವಾಹನೆಯಾಯಿತು ಪಂಜುರ್ಲಿ ದೈವ..!!

- Advertisement -
- Advertisement -

ಬೆಂಗಳೂರು: ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೋರ್ವನ ಮೇಲೆ ಪಂಜುರ್ಲಿ ದೈವ ಆವಾಹನೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕಾಂತಾರ ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ದೈವ ಆವಾಹನೆಯಾಗಿದೆ ಎನ್ನಲಾಗಿದೆ.

ಬೆಂಗಳೂರಿನ ಹೊಂಬೇಗೌಡ ಪಿಯು ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿಶಾಲ್ ಕಾಂತಾರ ಸಿನಿಮಾದ “ವರಾಹ ರೂಪಂ” ಹಾಡಿಗೆ ನೃತ್ಯ ಮಾಡುತ್ತಿದ್ದನು. ಈ ವೇಳೆ ವಿದ್ಯಾರ್ಥಿ ಪಂಜುರ್ಲಿ ದೈವದ ವೇಷ ಧರಿಸಿದ್ದ. ಕೆಲ ನಿಮಿಷಗಳ ಬಳಿಕ ವೇದಿಕೆಯಿಂದ ಕೆಳಗೆ ಬಂದು ನರ್ತಿಸುತ್ತಿದ್ದಂತೆ ದೈವ ಆವಾಹನೆಯಾಗಿದೆ. ಬಳಿಕ ಸಹಪಾಠಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಯನ್ನು ಸಮಾಧಾನಪಡಿಸಿದ್ದಾರೆ. ಕಾರ್ಯಕ್ರಮ ಆಯೋಜಕರು ತಕ್ಷಣವೇ ಹಾಡು ನಿಲ್ಲಿಸಿದ್ದಾರೆ.

- Advertisement -

Related news

error: Content is protected !!