Sunday, June 14, 2026
spot_imgspot_img
spot_imgspot_img

ವಿಟ್ಲದ ಲಿಟ್ಲ್ ಡ್ಯಾನ್ಸರ್, ಬಹುಮುಖ ಪ್ರತಿಭೆ ನಿರೀಕ್ಷ ಶೆಟ್ಟಿಗೆ 2022 ನೇ ಸಾಲಿನ ಬಾಲ ಪ್ರತಿಭಾ ಪುರಸ್ಕಾರ

- Advertisement -
- Advertisement -

ಮೈಕ್ ಹಿಡಿದರೆ ನಿರೂಪಣೆಗೂ ಸೈ, ಭಾಷಣಕ್ಕೂ ಸೈ.. ಕಾಲಿಗೆ ಗೆಜ್ಜೆ ಕಟ್ಟಿದರೆ ಯಕ್ಷಗಾನಕ್ಕೂ ಸೈ.. ಫೋಕ್, ಭರತನಾಟ್ಯ, ಫಿಲ್ಮೀ ಡ್ಯಾನ್ಸ್ಗೂ ಸೈ.. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಸೈ ಎನ್ನುವಂತೆ ಹಲವು ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಬಹುಮುಖ ಪ್ರತಿಭೆ ನಮ್ಮ ವಿಟ್ಲದ ನಿರೀಕ್ಷಾ ಶೆಟ್ಟಿ ಪಡಾರಿನ ಗೋಪಾಲ ಶೆಟ್ಟಿ ಹಾಗೂ ಬಬಿತ ಶೆಟ್ಟಿ ದಂಪತಿಗಳ ಸುಪುತ್ರಿ.

ವಿಟ್ಲದ ಸೈಂಟ್ ರೀಟಾ ಆಂಗ್ಲಮಾಧ್ಯಮ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿರುವ ಬಹುಮುಖ ಪ್ರತಿಭೆ ನಿರೀಕ್ಷ ಶೆಟ್ಟಿ ವಿಟ್ಲ ಶಿವಂ ಡ್ಯಾನ್ಸ್ ಅಕಾಡೆಮಿಯಲ್ಲಿ ನೃತ್ಯ ತರಭೇತಿ ಹಾಗೂ ಆರ್.ಕೆ.ಆರ್ಟ್ ವಿಟ್ಲ ತಂಡದಲ್ಲಿ ಯಕ್ಷಗಾನ ತರಭೇತಿಯನ್ನು ಪಡೆಯುತ್ತಿದ್ದಾರೆ. ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುವ ಇವರ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ.

ಇವರ ಸಾಂಸ್ಕೃತಿಕ ಹಾಗೂ ಕಲಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರ ವತಿಯಿಂದ .ದಿ.ಎ ಶಿವಾನಂದ ಕರ್ಕೇರಾ ಸವಿ ನೆನಪು ಕಾರ್ಯಕ್ರಮದಲ್ಲಿ 2022 ನೇ ಸಾಲಿನ ಬಾಲ ಪ್ರತಿಭಾ ಪುರಸ್ಕಾರ ವನ್ನು ನೀಡಿ ಗೌರವಿಸಲಾಯಿತು.

astr
- Advertisement -

Related news

error: Content is protected !!