Saturday, June 13, 2026
spot_imgspot_img
spot_imgspot_img

ವಿಟ್ಲ: ಅಪರಿಚಿತರ ತಂಡದಿಂದ ಮೀನಿನ ವ್ಯಾಪಾರಿಯ ಅಪಹರಣ; ಪತ್ನಿಯಿಂದ ದೂರು ದಾಖಲು!

- Advertisement -
- Advertisement -
driving

ವಿಟ್ಲ: ಮೀನಿನ ವ್ಯಾಪಾರಿಯೊಬ್ಬರನ್ನು ಅಪರಿಚಿತರ ತಂಡವೊಂದು ಅಪಹರಣ ಪ್ರಕರಣ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪಹರಣಗೊಳಗಾದ ವ್ಯಕ್ತಿ ತಾಲೂಕು ಕೊಳ್ನಾಡು ಗ್ರಾಮದ ಕೆ ಪಿ ಬೈಲು ನಾರ್ಶ ನಿವಾಸಿ ಮಹಮ್ಮದ್ ಅನ್ಸಾರ್(34)ಎನ್ನಲಾಗಿದೆ.

ಮೀನಿನ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಮೊಹಮ್ಮದ್ ಅನ್ಸಾರ್ ಎಂಬವರು ಬೇರೆ ವ್ಯವಹಾರ ಮಾಡುತ್ತೇನೆಂದು 2 ತಿಂಗಳ ಹಿಂದೆ ಕೇರಳಕ್ಕೆ ಹೋಗುವುದಾಗಿ ತಿಳಿಸಿ ಹೋದವರು ಪತ್ನಿಗೆ ಕರೆ ಮಾಡುತ್ತಿದ್ದರು. ಬಳಿಕ ಮರಳಿ ಮನೆಗೆ ಮರಳಿದ್ದರು.

ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ಮೊಹಮ್ಮದ್ ಅನ್ಸಾರ್ ಅವರನ್ನು ಯಾರೋ ಅಪರಿಚಿತರು ಬಲವಂತವಾಗಿ ಕರೆದುಕೊಂಡು ಕಾರಿನಲ್ಲಿ ಕುಳ್ಳಿರಿಸಿ ಅಪಹರಿಸಿಕೊಂಡು ಹೋಗಿರುವುದಾಗಿ ಅನ್ಸಾರ್ ಅವರ ಪತ್ನಿ ಅಪ್ಸ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!