Thursday, April 25, 2024
spot_imgspot_img
spot_imgspot_img

ವಿಟ್ಲ: ಅಪ್ರಾಪ್ತ ಬಾಲಕಿಯ ಕಿಡ್ನಾಪ್, ಅತ್ಯಾಚಾರ ಪ್ರಕರಣ; ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

- Advertisement -G L Acharya panikkar
- Advertisement -

ವಿಟ್ಲ: ಬಂಟ್ವಾಳ ತಾಲೂಕು ಕೊಳ್ಳಾಡು ಗ್ರಾಮದ ನಿವಾಸಿ ತನ್ನ ಅಪ್ರಾಪ್ತ ವಯಸ್ಸಿನ ಮಗಳು ಕಾಣೆಯಾಗಿರುವ ಬಗ್ಗೆ ಅ.23 ರಂದು ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಅದರಂತೆ ಅ.ಕ್ರ. 161/2022 ಕಲಂ: 363 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಈಕೆಯು ಅ.24 ರಂದು ಪತ್ತೆಯಾಗಿದ್ದು, ಈಕೆಯನ್ನು ಸಖಿ ಕೇಂದ್ರಕ್ಕೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆಯನ್ನು ಮಾಡಿಲಾಗಿದೆ. ಬಳಿಕ ನೊಂದ ಬಾಲಕಿ ನೀಡಿದ ದೂರಿನಂತೆ ಆರೋಪಿಗಳಾದ ಸಜಾದ್‌, ಆಸೀಫ್, ಶಾಫಿ ಎಂಬವರ ಮೇಲೆ ಈಗಾಗಲೇ ದಾಖಲಾದ ಪ್ರಕರಣಕ್ಕೆ ಪೋಕ್ಸೋ ಕಾಯ್ದೆ ಅಳವಡಿಸಲಾಗಿದ್ದು, ಸಜಾದ್ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆಸೀಫ್ ಎಂಬಾತನು ಈಗಾಗಲೇ ವಾರಂಟ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

ನೊಂದ ಬಾಲಕಿಯ ಹೇಳಿಕೆಯ ಆದಾರದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಆರೋಪಿ ಸಂಶೀರ್ ಎಂಬಾತನು ನೊಂದ ಬಾಲಕಿಯ ಮನೆಯಲ್ಲಿ ಲೈಂಗಿಕ ಅತ್ಯಾಚಾರ ಮಾಡಿರುವ ಹಿನ್ನಲೆಯಲ್ಲಿ ಅ ಕ್ರ: 168/2022 ಕಲಂ 3(a), 4, 5(l) 66 ಪೋಕ್ಸೋ ಕಾಯ್ದೆ, ಕಲಂ: 376(2) (n) ಐಪಿಸಿಯಂತೆ ಪ್ರಕರಣ ದಾಖಲಿಸಿದ್ದು, ಆರೋಪಿ ಸಂಶೀರ್ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಎರಡೂ ಪ್ರಕರಣಗಳು ಸೇರಿ ಒಟ್ಟು 3 ಆರೋಪಿಗಳ ಬಂಧನವಾಗಿದ್ದು, ಒಬ್ಬ ಆರೋಪಿಯ ದಸ್ತಗಿರಿಗೆ ಕ್ರಮ ಕೈಗೊಂಡಿದೆ.

- Advertisement -

Related news

error: Content is protected !!